ಭಾರತ ಪ್ರಜಾಪ್ರಭುತ್ವದ ತಾಯಿಯಿದ್ದಂತೆ: ಸಂವಿಧಾನ ಕೋಟ್ಯಾಂತರ ಜನರ ಭಾವನೆ, ಬದುಕು- ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಡಿಸೆಂಬರ್,14,2024 (www.justkannada.in): ಭಾರತ ಪ್ರಜಾಪ್ರಭುತ್ವದ ತಾಯಿಯಿದ್ದಂತೆ: ಸಂವಿಧಾನವು ಕೋಟ್ಯಾಂತರ ಜನರ ಭಾವನೆ, ಬದುಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ಇಂದು ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ,  ಸಂವಿಧಾನ ಮೇಲಿನ ಚರ್ಚೆಯಲ್ಲಿ ಭಾಗಯಾಗಿದ್ದಕ್ಕೆ ಧನ್ಯವಾದ . ನಾವು ಪ್ರಜಾಪ್ರಭುತ್ವದ ಹಬ್ಬ ಸಂಭ್ರಮಿಸುತ್ತಿದ್ದೇವೆ. ಡಾ.ಬಿಆರ್ ಅಂಬೇಡ್ಕರ್ ಚಿಂತನೆ ಸಂಭ್ರಮಿಸುವ ದಿನ ಬುಡಕಟ್ಟು ಮಹಿಳೆ ರಾಷ್ಟ್ರಪತಿಯಾಗಿದ್ದು ನಮ್ಮ ಹೆಮ್ಮೆ.  ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ.  2047ಕ್ಕೆ ಭಾರತ ಅಭಿವೃದ್ದಿ ಹೊಂದಿದ ದೇಶವಾಗಲಿದೆ ಎಂದರು.

ಆರ್ಟಿಕಲ್ 370 ದೇಶದ ಏಕತೆಗೆ ಮಾರಕ ಆಗಿತ್ತು. ಹೀಗಾಗಿ ಅದನ್ನು ರದ್ದು ಮಾಡಿದವು. ದೇಶದಲ್ಲಿ ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿ ಮಾಡಿದ್ದೇವೆ. ಒನ್ ನೇಷನ್ ಒನ್ ಎಲೆಕ್ಷನ್ ಜಾರಿ ಮಾಡಲಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಢಿಸುತ್ತಿದ್ದಾರೆ. ಕೇಂದ್ರದ ಯೋಜನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Lokasabha, India, mother of democracy, PM Modi