ಮೈಸೂರು,ನವೆಂಬರ್,6,2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ನಾಯಕರ ವಿರುದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯ ವಿಚಾರಣೆ ಕುರಿತು ಮಾತನಾಡಿದ ಸಚಿವ ಹೆಚ್ ಸಿ ಮಹದೇವಪ್ಪ, ಲೋಕಾಯುಕ್ತ ಇಂಡಿಪೆಂಡೆಂಟ್ ತನಿಖಾ ಸಂಸ್ಥೆ. ದೇಶದ ಪ್ರಜೆಯಾಗಿ ಕಾನೂನಿಗೆ ತಲೆಬಾಗಿ ವಿಚಾರಣೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ರಾಜೀನಾಮೆ ಕೇಳಲು ಬಿಜೆಪಿಯವರಿಗೆ ಏನು ನೈತಿಕತೆ ಇದೆ. ಯಡಿಯೂರಪ್ಪ, ಆರ್.ಅಶೋಕ್ ಏನ್ ಜಡ್ಜಾ? ಎಂದು ಕಿಡಕಾರಿದರು
ಬಿಜೆಪಿಯವರು ಮಾತನಾಡಲು ಏನು ನೈತಿಕತೆ ಇದೆ. ಅಸಂಬಂಧ ವಿಚಾರಗಳ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಈ ರಾಜಕೀಯ ಪಿತೂರಿ ನಡೆಯಲ್ಲ ಎಂದು ಗುಡುಗಿದರು.
ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ರಾಜೀನಾಮೆ ಕೊಡಬೇಕು- ಸಚಿವ ವೆಂಕಟೇಶ್
ಸಚಿವ ವೆಂಕಟೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯರನ್ನ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು, ಅದಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ರಾಜೀನಾಮೆ ಕೊಡಬೇಕು. ಇವರ ಪಾತ್ರವೇ ಇಲ್ಲ, ಇದು ಸುಳ್ಳು ಆರೋಪ. ಸುಳ್ಳನ್ನ ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ 100% ನಿರಾಪರಾಧಿಯಾಗಿ ಹೊರ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Key words: Lokayukta, CM Siddaramaiah, BJP, HC Mahadevappa