ಮೈಸೂರು, ಜ.೨೪, ೨೦೨೫: ಸಿಎಂ ಸಿದ್ದರಾಮಯ್ಯ ಅವರ ಮಡದಿ ಪಾರ್ವತಿ ಅವರಿಗೆ ಮಂಜೂರಾದ ನಿವೇಶಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಅಂತಿಮ ವರದಿ ನಾಳೆಯೇ ಕರ್ನಾಟಕ ಲೋಕಾಯುಕ್ತ IGP ಸುಬ್ರಮಣ್ಣೇಶ್ವರ ರಾವ್ ಅವರಿಗೆ ಸಲ್ಲಿಕೆಯಾಗಲಿದೆ.
ಒಟ್ಟು ಅಂದಾಜು ಮೂರು ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್ ಅವರು ಸಲ್ಲಿಸಲ್ಲಿದ್ದಾರೆ ಎಂದು ಮೂಲಗಳು “ ಜಸ್ಟ್ ಕನ್ನಡ” ಗೆ ತಿಳಿಸಿವೆ. ಮಾಹಿತಿಗಳ ಪ್ರಕಾರ, ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆ ಹಾಗೂ ವಿಚಾರಣೆಯ ವರದಿಯಲ್ಲಿರುವ ಅಂಶಗಳು ನಾಳೆಯೇ ಸಲ್ಲಿಕೆಯಾಗಲಿದೆ.
ನಾಳೆ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿರುವ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್. ಬಳಿಕ ಸೋಮವಾರ ಕೋರ್ಟ್ ಎದುರು ವರದಿ ಸಲ್ಲಿಕೆಯಾಗಲಿದೆ.
ಏನೇನಿರಲಿದೆ ವರದಿಯಲ್ಲಿ:
25 ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳ ವರದಿ, 17 A ಅಡಿಯಲ್ಲಿ ಸಂಗ್ರಹಿಸಿರುವ ವರದಿ, ಆಡಿಯೋ, ವಿಡಿಯೋ, ಎಫ್ಎಸ್ ಎಲ್ ವರದಿಗಳು. ದಾಖಲೆಗಳ ಸಂಗ್ರಹದ ಹಾರ್ಡ್ ಡಿಸ್ಕ್, ಸಿಡಿ, ಪೆನ್ ಡ್ರೈವ್ ಗಳು ಹಾಗೂ ಮೈಸೂರು ವಿಜಯನಗರದ 14 ಸೈಟ್ ಗಳು, ಕೆಸರೆಯ ಸರ್ವೆ ನಂ.464 ರ 3.16 ಎಕರೆ ಭೂಮಿಯ ಮಾಹಿತಿಯನ್ನು ಒಳಗೊಂಡಿದೆ.
ಆರ್ ಟಿಸಿ, ಭೂ ಪರಿವರ್ತನೆ, ಮೂಲ ಮಾಲೀಕರ ಬಳಿಯ ದಾಖಲೆಗಳು, ಕೈ ಬದಲಾವಣೆಯಾದ ದಾಖಲೆಗಳ ಸಂಗ್ರಹ ಜತೆಗೆ ಮುಡಾದಲ್ಲಿ ಯಾವ- ಯಾವ ಹಂತದಲ್ಲಿ ಪತ್ರ ವ್ಯವಹಾರ ನಡೆದಿದೆ, ಯಾವ ಅಧಿಕಾರಿಗಳು ಸೈಟ್ ಹಂಚಿಕೆಗೆ ಸಹಿ ಹಾಕಿದ್ದರು ಎಂಬುದರ ವರದಿ ಅಡಕಗೊಂಡಿದೆ.
1994 ರಿಂದ 2024 ರವರೆಗಿನ ಎಲ್ಲಾ ಮಾಹಿತಿಗಳ ಸಂಗ್ರಹ, ಹಿಂದಿನ ಆಯುಕ್ತರುಗಳು, ಅಧ್ಯಕ್ಷರುಗಳು, ಎಂಜಿನಿಯರ್ ಗಳು , ನಗರ ಯೋಜನಾ ಅಧಿಕಾರಿಗಳು, ಸರ್ವೆ ಅಧಿಕಾರಿಗಳು, ತಹಶಿಲ್ದಾರ್ ಗಳು, ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಂದಿನ ಎಡಿಸಿ ಅವರ ಹೇಳಿಕೆಗಳು ಹಾಗೂ ದೂರುದಾರ ಸ್ನೇಹಮಯಿಕೃಷ್ಣ ಅವರಿಂದ ಸಂಗ್ರಹವಾದ ದಾಖಲೆಗಳು ವರದಿಯಲ್ಲಿವೆ.
ಆರೋಪಿತರಾದ A1 ಸಿದ್ದರಾಮಯ್ಯ, A2 ಬಿ.ಎನ್.ಪಾರ್ವತಿ A3 ಮಲ್ಲಿಕಾರ್ಜುನಸ್ವಾಮಿ, A4 ದೇವರಾಜು ಅವರ ಹೇಳಿಕೆಗಳು ಹಾಗೂ ಈ ಎಲ್ಲರ ಹೇಳಿಕೆಗಳನ್ನ ಆಧರಿಸಿ ತಯಾರಾದ ಫೈನಲ್ ರಿಪೋರ್ಟ್ ನಾಳೆ ಕರ್ನಾಟಕ ಲೋಕಾಯುಕ್ತ IGP ಅವರಿಗೆ ಸಲ್ಲಿಕೆಯಾಗಲಿದೆ.
key words: MUDA BIG EXCLUSIVE, 3000-page report, Lokayukta IGP
SUMMARY:
MUDA BIG EXCLUSIVE: 3000-page report to be submitted to Lokayukta ADGP tomorrow..!
An inquiry has been conducted into the case of plots allotted to CM Siddaramaiah’s wife Parvati, and the final report will be submitted to Karnataka Lokayukta IGP Subramaneshwara Rao tomorrow.