ಲೋಕಾಯುಕ್ತ ದಾಳಿ ವೇಳೆ ಅಧಿಕಾರಿ ನಾಗೇಶ್ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ತೆ

ಮೈಸೂರು,ನವೆಂಬರ್,13,2024 (www.justkannada.in): ನಿನ್ನೆ  ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕರ ಸಂಪರ್ಕಾಧಿಕಾರಿ ನಾಗೇಶ್ .ಡಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಅಪ್ರಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಿನಾಂಕ 12-11-2024 ರಂದು ಕರ್ನಾಟಕ ಲೋಕಾಯುಕ್ತ ಮೈಸೂರು ವಿಭಾಗದ ಪೊಲೀಸ್ ಅಧಿಕಾರಿಗಳು ಬಲ್ಲಮೂಲಗಳ ಮಾಹಿತಿಯನ್ನಾಧರಿಸಿ ಮೈಸೂರು, ಶ್ರೀರಂಗಪಟ್ಟಣ, ಮತ್ತು ಬೆಂಗಳೂರು ಇಲ್ಲಿ ಆರೋಪಿತ ಸರ್ಕಾರಿ ಅಧಿಕಾರಿ ನಾಗೇಶ್.ಡಿ, ಅವರ ಮನೆ ಹಾಗೂ ಕಛೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು.  ದಾಳಿ ವೇಳೆ ಸುಮಾರು ರೂ. 1,95,00,000/- ಸ್ಥಿರಾಸ್ತಿ ಹಾಗೂ ರೂ.77.74,716. ರೂ ಮೌಲ್ಯದ ಬೆಲೆಬಾಳುವ ಚರಾಸ್ತಿಗಳು ಪತ್ತೆಯಾಗಿದೆ  ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿತ ಸರ್ಕಾರಿ ಅಧಿಕಾರಿಯ ಮನೆ ಹಾಗೂ ಕಛೇರಿಗಳ ಮೇಲಿನ ದಾಳಿ ಕಾರ್ಯಾಚರಣೆಯನ್ನುಕರ್ನಾಟಕ ಲೋಕಾಯುಕ್ತದ ಅಪರ ಪೊಲೀಸ್ ಮಹಾನಿರ್ದೇಶಕರಾದ ಮನೀಷ್‌ ಕರ್ಬಿಕರ್ ಮತ್ತು ಲೋಕಾಯುಕ್ತ, ಪೊಲೀಸ್ ಮಹಾನಿರೀಕ್ಷಕರಾದ ಸುಬ್ರಹ್ಮಣೇಶ್ವರರಾವ್ ಇವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಮೈಸೂರು ವಿಭಾಗದ ಅಧೀಕ್ಷಕರು ಉದೇಶ.ಟಿ.ಜೆ ನೇತೃತ್ವದಲ್ಲಿ ಡಿ.ವೈ.ಎಸ್.ಪಿ ಪ್ರಕಾಶ್.ಕೆ.ಸಿ. ಹಾಗೂ ಪೊಲೀಸ್ ನಿರೀಕ್ಷಕರುಗಳಾದ ಅಶೋಕ್‌ ಕುಮಾರ್, ಉಮೇಶ್, ರೂಪಶ್ರೀ, ರವಿಕುಮಾರ್, ಲೋಹಿತ್‌ ಕುಮಾರ್, ಹಾಗೂ ಸಿಬ್ಬಂದಿಗಳು ಈ ದಾಳಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

Key words: Lokayukta, raid, property, mysore, Officer, Nagesh, house