ಮೈಸೂರು,ಜನವರಿ,14,2021(www.justkannada.in) : ಬಹುನಿರೀಕ್ಷಿತ ಕೋವಿಡ್ ಲಸಿಕೆ ಮೈಸೂರಿಗೆ ಆಗಮಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಕೋಲ್ಡ್ ಸ್ಟೋರೇಜ್ ನಲ್ಲಿ ಲಸಿಕೆ ಭದ್ರವಾಗಿದೆ.
ತಡರಾತ್ರಿ 11.30ಕ್ಕೆ ಮೈಸೂರಿಗೆ ಕೊರೊನಾ ವಾಕ್ಸಿನ್ ತರಲಾಗಿದೆ. ಕೋಲ್ಡ್ ಸ್ಟೋರೇಜ್ ನಲ್ಲಿ 47ಸಾವಿರ ಡೋಸೆಜ್ ದಾಸ್ತಾನು ಶೇಖರಿಸಲಾಗಿದೆ.20500 ಡೋಸೆಜ್ ಮೈಸೂರು ಜಿಲ್ಲೆಗೆ ನಿಗಧಿಯಾಗಿದ್ದು, ಉಳಿದ ಡೋಸೆಜ್ ಚಾಮರಾಜನಗರ, ಮಂಡ್ಯ, ಕೊಡಗು, ಹಾಗೂ ಹಾಸನಕ್ಕೆ ಹಂಚಿಕೆಯಾಗಲಿದೆ.ಮೈಸೂರಿನಿಂದ ಇತರ ಜಿಲ್ಲೆಗಳಿಗೆ ಲಸಿಕೆ ತಲುಪಲಿದ್ದು, ಲಸಿಕೆ ವಿತರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.
key words : long-awaited-Kovid-vaccine-arrives-Mysore