ಬೆಂಗಳೂರು,ಡಿಸೆಂಬರ್,11,2020(www.justkannada.in) : ಸರ್ಕಾರವು ನೇರವಾಗಿ ಪ್ರತಿಭಟನಾ ನಿರತರ ಜೊತೆಗೆ ನಿನ್ನೆಯೇ ಮಾತನಾಡಬೇಕಿತ್ತು. ಹೋರಾಟಗಾರರನ್ನು ತಿರಸ್ಕೃತ ಭಾವನೆಯಿಂದ ನೋಡುತ್ತಿದ್ದು, ಸರ್ಕಾರದ ನಡೆ ಸರಿಯಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನವ್ಯಕ್ತಪಡಿಸಿದ್ದಾರೆ.
ಸರ್ಕಾರವು ಪ್ರತಿಭಟನಕಾರರ ಜೊತೆ ಮಾತನಾಡದೇ, ಯಾವುದೇ ನಿರ್ಧಾರಕ್ಕೆ ಬರುವುದಕ್ಕೂ ಸಾಧ್ಯವಿಲ್ಲ. ಧರಣಿ ನಿರತರನ್ನು ಚರ್ಚೆಗೆ ಆಹ್ವಾನಿಸಬೇಕು. ಮಾತುಕತೆ ನಡೆಸಬೇಕು. ಸರ್ಕಾರವು ಉದ್ದೇಶ ಪೂರ್ವಕವಾಗಿ ದಾರಿತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ. ಎಂದು ಬೇಸರವ್ಯಕ್ತಪಡಿಸಿದರು.
key words : Looking-fighters’-rejection-Government’s-move-not-right-peasant-leader-Kodihalli Chandrasekhar