ಬೆಂಗಳೂರು,ಏಪ್ರಿಲ್,15,2025 (www.justkannada.in): ರಾಜ್ಯಸರ್ಕಾರ ಏರಿಕೆ ಮಾಡಿರುವ ಡೀಸೆಲ್ ಬೆಲೆಯನ್ನ ಇಳಿಕೆ ಮಾಡುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು ಮಧ್ಯರಾತ್ರಿಯಿಂದಲೇ ಲಾರಿಗಳ ಸಂಚಾರ ಬಂದ್ ಆಗಿದೆ.
ರಾಜ್ಯಾದ್ಯಂತ ಲಾರಿಗಳು ಗೂಡ್ಸ್ ಗಾಡಿಗಳು ರಸ್ತೆಗೆ ಇಳಿಯದೆ ನಿಂತಲ್ಲೆ ನಿಂತಿವೆ. ಬೆಂಗಳೂರಿನ ಯಶವಂತಪುರದ ದೇವರಾಜ್ ಅರಸು ಟ್ರಕ್ ಟರ್ಮಿನಲ್ ನೂರಾರು ಲಾರಿ ಗೂಡ್ಸ್ ವಾಹನಗಳು ಮಧ್ಯರಾತ್ರಿಯಿಂದಲೇ ಸಂಚಾರ ಬಂದ್ ಮಾಡಿದ್ದು ನಿಂತಲ್ಲೆ ನಿಂತಿವೆ.
ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲ್ಲೂಕಿನ ರಾಮಾಪುರ ಗಡಿಯಲ್ಲಿ ಬಂದ್ ಮಾಡಲಾಗಿದ್ದು, ಮುಷ್ಕರ ವಾಪಸ್ ಪಡೆಯಲ್ಲ ಡೀಸೆಲ್ ದರ ಇಳಿಸುವವರೆಗೂ ಮುಷ್ಕರ ಹಿಂಪಡಯಲ್ಲ ಎಂದು ಲಾರಿ ಮಾಲೀಕರ ಸಂಘ ತಿಳಿಸಿದೆ.
ಲಾರಿ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಮಧ್ಯಾಹ್ನ 1ಗಂಟೆಗೆ ಶಾಂತಿನಗರದ ಕೆಎಸ್ ಆರ್ ಟಿಸಿ ಕಚೇರಿಯಲ್ಲಿ ಸಭೆ ಕರೆದಿದ್ದು ಚರ್ಚೆ ನಡೆಸಲಿದ್ದಾರೆ.
Key words: lorry strike, Minister, Ramalinga Reddy, meeting