ಬೆಂಗಳೂರು,ಜೂನ್,17,2023(www.justkannada.in): ವಿದ್ಯುತ್ ದರ ಇಳಿಕೆ ಮಾಡುವಂತೆ ಆಗ್ರಹಿಸಿ ಇಂಧನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪತ್ರ ಬರೆದು ಮನವಿ ಮಾಡಿದೆ.
ಪ್ರಮುಖ 6 ಅಂಶಗಳನ್ನ ಉಲ್ಲೇಖಿಸಿ ಹೋಟೆಲ್ ಮಾಲೀಕರ ಸಂಘ ಪತ್ರ ಬರೆದಿದೆ. ವಿದ್ಯುತ್ ದರ ಹೆಚ್ಚಳ ಮುಂದಿನ ಒಂದು ವರ್ಷಕ್ಕೆ ಮುಂದೂಡಬೇಕು. ಸದ್ಯಕ್ಕೆ ಇರುವ ವಿದ್ಯುತ್ ತೆರಿಗೆಯನ್ನು 9 ಪರ್ಸೆಂಟ್ ರಿಂದ 3 ಪರ್ಸೆಂಟ್ ಇಳಿಕೆ ಮಾಡಬೇಕು. ಟ್ರಾನ್ಸ್ ಮಿಷನ್ ಮತ್ತು ಡಿಸ್ಟ್ರಿಬ್ಯುಷನ್ ಗಳಲ್ಲಿ ಆಗುವ ಲಾಸ್ ಕಡಿಮೆ ಮಾಡಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳು ಪಾವತಿಸಬೇಕಾದ ಬಾಕಿ ಮೊತ್ತ ಬಡ್ಡಿ ಸಹಿತ ಸಂಗ್ರಹಿಸಬೇಕು. ಪ್ರಿಪೈಡ್ ಮೀಟರ್ ಅಳವಡಿಕೆ ಮಾಡಿ ಗ್ರಾಹಕರ ಠೇವಣಿ ಹಣ ಹಿಂದಿರುಗಿಸಬೇಕು. ಅನಗತ್ಯ ಅಡ್ಮಿನಿಸ್ಟ್ರೇಷನ್ ಖರ್ಚು ವೆಚ್ಚಗಳನ್ನು ಹತೋಟಿಗೆ ತರುವುದು ಎಂಬ ಅಂಶಗಳನ್ನ ಸರ್ಕಾರದ ಗಮನಕ್ಕೆ ತಂದಿದೆ.
ಇವೆಲ್ಲವನ್ನೂ ಪರಿಗಣಿಸಿದ್ದಲ್ಲಿ ಉದ್ಯಮಿಗಳಾದ ನಮಗೂ ವಿದ್ಯುತ್ ಇಲಾಖೆಗೂ ಅನೂಕುಲವಾಗಲಿದೆ. ಇಲ್ಲದಿದ್ದಲ್ಲಿ ಹೊಟೇಲ್ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಹೋಟೆಲ್ ಅಸೋಸಿಯೇಶನ್ ಮನವಿ ಮಾಡಿದೆ.
Key words: Lower -electricity –rates-Bangalore -Hotel –Owners- Association – Minister- KJ George.