ಮೈಸೂರು,ಫೆಬ್ರವರಿ,15,2021(www.justkannada.in): ಕೇಂದ್ರ ಸರ್ಕಾರ ಎಲ್.ಪಿ.ಜಿ ದರ ಏರಿಕೆ ದಂಧೆ ಮಾಡುತ್ತಿದೆ. ಈ ಮೂಲಕ ಜನಸಾಮಾನ್ಯರಿಗೆ ಬರೆ ಮೇಲೆ ಬರೆ ಹಾಕುವ ಕೆಲಸ ಮಾಡುತ್ತಿದೆ. ಇದೇನಾ ಮೋದಿ ಹೇಳಿದ್ದ ಅಚ್ಚೇ ದಿನ್..? ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪಾ ಅಮರ್ ನಾಥ್ ವಾಗ್ದಾಳಿ ನಡೆಸಿದರು.
ಎಲ್.ಪಿ.ಜಿ ಗ್ಯಾಸ್ ದರ ಏರಿಕೆ ಹಿನ್ನಲೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಾ.ಪುಷ್ಪ ಅಮರ್ ನಾಥ್ , ಕೇಂದ್ರ ಸರ್ಕಾರದ ಮಹಿಳಾ ವಿರೋಧಿ ಮುಖ ಮತ್ತೊಮ್ಮೆ ಬಯಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ 440ರೂ ಇತ್ತು. ಆದರೆ ಇಂದು 772ರೂ ಆಗಿದೆ. ಒಂದೇ ತಿಂಗಳಿನಲ್ಲಿ 75 ರೂ ಹೆಚ್ಚಾಗಿದೆ. ಪದೇ ಪದೇ ಏರಿಕೆಯಾಗ್ತಿರುವುದಕ್ಕೆ ಕೇಂದ್ರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ನಿರ್ಮಲಾ ಸೀತಾರಾಮ್, ಸ್ಮೃತಿ ಇರಾನಿಯವರ ಮನೆಯಲ್ಲಿ ಗ್ಯಾಸ್ ಬಳಸಲ್ವಾ..?
ಈ ಹಿಂದೆ ಎಲ್.ಪಿ.ಜಿಯಲ್ಲಿ ನೀಡುತ್ತಿದ್ದ ಸಬ್ಸಿಡಿಯನ್ನೂ ನಿಲ್ಲಿಸಿದೆ. ಕೇಂದ್ರ ಜನಸಾಮಾನ್ಯರಿಗೆ ಬರೆ ಮೇಲೆ ಬರೆ ಹಾಕುವ ಕೆಲಸ ಮಾಡುತ್ತಿದ್ದು, ಈ ಮಹಿಳಾ ಧೋರಣೆ ಬಗ್ಗೆ ಬಿಜೆಪಿ ನಾಯಕಿಯರು ಧ್ವನಿ ಎತ್ತುತ್ತಿಲ್ಲ. ಏಕೆ ನಿರ್ಮಲಾ ಸೀತಾರಾಮ್, ಸ್ಮೃತಿ ಇರಾನಿಯವರ ಮನೆಯಲ್ಲಿ ಗ್ಯಾಸ್ ಬಳಸಲ್ವಾ..? ಯಾವ ಉದ್ದೇಶಕ್ಕೆ ಮಹಿಳಾ ದ್ರೋಹಿ ಕೆಲಸ ಮಾಡುತ್ತಿದ್ದೀರಾ..? ಎಂದು ಕೇಂದ್ರ ಸರ್ಕಾರದ ವಿರುದ್ಧ ಪುಷ್ಪಾಅಮರ್ ನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ನಿಮ್ಮ ಪ್ರನಾಳಿಕೆಯಲ್ಲಿ 300ರೂ ಗೆ ಸಿಲಿಂಡರ್ ನೀಡುವ ಭರವಸೆ ನೀಡಿದ್ರಿ. ಆದಕ್ಕೆ ತಕ್ಕಂತೆ ನಡೆದುಕೊಂಡಿದ್ದೀರಾ..? 70ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುವ ನೀವು 7 ವರ್ಷದಿಂದ ಏನು ಮಾಡಿದ್ದೀರಿ. ಕೇಂದ್ರ ಸರ್ಕಾರ ಎಲ್.ಪಿ.ಜಿ ದರ ಏರಿಕೆ ದಂಧೆ ಮಾಡುತ್ತಿದೆ. ಅಲ್ಲದೇ ಬೈಕ್, ಟಿವಿ, ಫ್ರಿಡ್ಜ್ ಹೊಂದಿದ್ರೆ ಬಿಪಿಎಲ್ ಕಾರ್ಡ್ ಕಡಿತ ಎಂದು ಹೇಳಿದ್ದೀರಿ. ನಿಮಗೆ ನಾಚಿಕೆಯಾಗಲ್ವಾ.? ನಿಮಗೇನ್ ದೊಡ್ಡರೋಗ ಬಂದಿದೆ.? ಎಂದು ರಾಜ್ಯ ಸರ್ಕಾರದ ವಿರುದ್ದವೂ ಡಾ ಪುಷ್ಪಾ ಅಮರ್ ನಾಥ್ ಕಿಡಿಕಾರಿದರು. ಹಾಗೆಯೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಲ್ಲಿ ಕೇಂದ್ರಕ್ಕೆ ನೋಬೆಲೆ ಪಾರಿತೋಷಕ ನೀಡಬೇಕು ಎಂದು ವ್ಯಂಗ್ಯವಾಡಿದರು.
Key words: LPG Rate-hike–Center-kpcc-women-unit-president- Dr. Pushpa Amarnath