ಬೆಂಗಳೂರು, ಅಕ್ಟೋಬರ್ 27, 2023 (www.justkannada.in): ಭಾರತದಲ್ಲಿ ಚಂದ್ರ ಗ್ರಹಣ ನಾಳೆ ರಾತ್ರಿ 11:31 ಕ್ಕೆ ಪ್ರಾರಂಭವಾಗಿ ಭಾನುವಾರ ಮುಂಜಾನೆ 3:36 ಕ್ಕೆ ಕೊನೆಗೊಳ್ಳುತ್ತದೆ.
ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕ, ಉತ್ತರ ಅಮೆರಿಕ, ಉತ್ತರ / ಪೂರ್ವ ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದ ಕೆಲವು ಭಾಗಗಳಲ್ಲಿಯೂ ಚಂದ್ರಗ್ರಹಣ ಗೋಚರಿಸುತ್ತದೆ.
ಚಂದ್ರ ಗ್ರಹಣವು ಹುಣ್ಣಿಮೆಯ ಸಮಯದಲ್ಲಿ ಮಾತ್ರ ಸಂಭವಿಸಬಹುದು. ಕೊನೆಯ ಸಂಪೂರ್ಣ ಚಂದ್ರಗ್ರಹಣವು ನವೆಂಬರ್ 8, 2022 ರಂದು ಸಂಭವಿಸಿತ್ತು. ಇನ್ನು ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮಾರ್ಚ್ 13/14, 2025 ರಂದು ಸಂಭವಿಸಲಿದೆ.
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಸ್ಥಾನ ಪಡೆದಾಗ ಮತ್ತು ಚಂದ್ರನ ಮೇಲ್ಮೈಯಲ್ಲಿ ನೆರಳನ್ನು ಬೀರಿದಾಗ ಚಂದ್ರ ಗ್ರಹಣ ಸಂಭವಿಸುತ್ತದೆ.