ಬಿಜೆಪಿ ಸರ್ಕಾರ ‘ ಪಾಪದ ಕೂಸು ‘ : ಮಾಜಿ ಸಚಿವ ಎಂ.ಬಿ. ಪಾಟೀಲ ಲೇವಡಿ

ವಿಜಯಪುರ, ಆ.04, 2019 : (www.justkannada.in news) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪಾಪದ ಕೂಸು ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಲೇವಡಿ ಮಾಡಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿದ ಮಾಜಿ ಸಚಿವ ಪಾಟೀಲ್ ಹೇಳಿದಿಷ್ಟು…

ಬಿಎಸ್ವೈ ಸಿಎಂಯಾಗುವ ಅರ್ಜೆನ್ಸಿ ಇತ್ತು. ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಬಿಎಸ್ವೈಗೆ ಇಂಟರೆಸ್ಟ್ ಇಲ್ಲ. ಬಿಎಸ್ವೈ ಒನ್ ಮ್ಯಾನ್ ಶೋ ಮಾಡುವ ಚಿಂತನೆ ಮಾಡಿದ್ದಾರೆ. ಇದೊಂದು ಅನೈತಿಕ ಸರ್ಕಾರ. ಬಿಎಸ್ವೈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ.
ಸಿಎಂ ಬಿಎಸ್ವೈ ಒಕ್ಕಲಿಗರ ಟಾರ್ಗೆಟ್ ವಿಚಾರ. ಹೊಸ ಸರ್ಕಾರ ಬಂದಿದೆ. ಹೊಸ ಹುರುಪು ಇದೆ . ಸಂಪೂರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.ಇದು ಶೋಭೆ ತರುವುದಂತಲ್ಲ. ರಾಜಕಾರಣದಲ್ಲಿ ಜಾತಿ ಮುಖ್ಯವಲ್ಲ

ಕೃಷ್ಣಾ ನದಿ ಪ್ರವಾಹ ವಿಚಾರ ಬಿಎಸ್ವೈ ಸರ್ಕಾರದ ವಿರುದ್ಧ ಗರಂ ಆದ ಎಂ ಬಿ ಪಾಟೀಲ. ತಕ್ಷಣವೇ ಸಿಎಂ ಯಡಿಯೂರಪ್ಪ ಪ್ರವಾಹ ಪೀಡಿತರ ರಕ್ಷಣೆಗೆ ಬರಬೇಕು. ಸಿಎಂ ಒಂದು ಮೀಟಿಂಗ್ ಬಿಟ್ಟು ಬೇರೆನು ಮಾಡಿಲ್ಲ.
ಸಂಬಂಧಪಟ್ಟ ಸಚಿವರೇ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ಎಂ ಬಿ‌ ಪಿ. ಕಂದಾಯ, ಕೃಷಿ ಸಚಿವರೇ ಇಲ್ಲ. ಸಿಎಂ ಸಭೆಗೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಎಂಬಿಪಿ.
ಒಬ್ಬರೇ ಸರ್ಕಾರ ನಡೆಸಬೇಕು ಅನ್ನೊ ಇರಾದೆ ಇದಿಯಾ ಎಂದು ಬಿಎಸ್ವೈ ವಿರುದ್ಧ ಗರಂ. ಖಾಯಂ ಬಿಎಸ್ವೈ ಒಬ್ಬರೇ ಬೇಕಾದ್ರೆ ಇರಲಿ. ವಿರೋಧ ಪಕ್ಷದಲ್ಲಿದ್ದಾಗ ತೋರಿಸುತ್ತಿದ್ದ ಅರ್ಜನ್ಸಿಯನ್ನ ಈಗ ತೋರಿಸಲಿ. ಕೇಂದ್ರ ಸರ್ಕಾರದ NDRF ಬಾಕಿ ಹಣವನ್ನ ನೀಡಲು ತಾರತಮ್ಯ ಇತ್ತು. ಸಧ್ಯ ಎರೆಡು ಕಡೆಗಳಲ್ಲಿ ಅವರದ್ದೆ ಸರ್ಕಾರ ಇದೆ ಬಾಕಿ ಹಣ ಕೊಡಿಸಲಿ. ನೆರೆ ಹಾಗೂ ಬರ ಪೀಡಿತರ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದಾವಿಸಬೇಕು.

 

key words : m.b.patil-congress-bjp-bsy