ಮೈಸೂರು, ಮಾ.07,2025: “ ಮುಡಾ” ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಗೆ ಇಡಿ ಸಮನ್ಸ್ . ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ “ ಇಡಿ ಸಮನ್ಸ್ “ ರದ್ದು ಮಾಡಿರುವುದು ಸ್ವಾಗತರ್ಹ.
ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಸುದ್ದಿ ಗೋಷ್ಠಿ.
ಇಡಿ ತನಿಖೆಗೆ ಹಾಜರಾಗಬೇಕು ಎಂದು ಸಮನ್ಸ್ ಜಾರಿ ಮಾಡಿದ್ದ ಆದೇಶವನ್ನೇ ಕೋರ್ಟ್ ಈಗ ರದ್ದು ಮಾಡಿದೆ. ಆರಂಭದಿಂದಲೂ ಈ ಪ್ರಕರಣದಲ್ಲಿ ಸಿಎಂ ಪಾತ್ರ ಇಲ್ಲ ಅಂತ ಹೇಳಿಕೊಂಡು ಬಂದಿದ್ದೇವೆ. ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನ ಮಾಡುವುದನ್ನು ಈಗಲಾದರೂ ಬಿಡಬೇಕು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕೂಡ ವೃತ ಆರೋಪ ಮಾಡುವುದನ್ನು ನಿಲ್ಲಿಸಬೇಕು.
“ಇಡಿ” ಯವರೂ ಕೂಡ ಈ ಪ್ರಕರಣವನ್ನ ಇಲ್ಲಿಗೆ ನಿಲ್ಲಿಸಬೇಕು. ಮನಿ ಲ್ಯಾಂಡರಿಂಗ್ ವಿಚಾರದಲ್ಲಿ ಮಾತ್ರ ಇಡಿ ತನಿಖೆ ಮಾಡಲು ಅಧಿಕಾರ ಇರುವುದು. ಇಡಿ ತನಿಖಾ ಸಂಸ್ಥೆ ಸುಮಾರು 5 ವರ್ಷಗಳಿಂದ 7083 ಕೇಸ್ ಗಳ ಬಗ್ಗೆ ತನಿಖೆ ಮಾಡಿದೆ. ಅದರಲ್ಲಿ ಕೇವಲ 42 ಪ್ರಕರಣಗಳು ಮಾತ್ರ ಇತ್ಯರ್ಥ ಆಗಿದೆ. ಇನ್ನುಳಿದ ಪ್ರಮಾಣಗಳಲ್ಲಿ ಯಾವುದೇ ರೀತಿಯಾ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎಂದರು.
ಸ್ನೇಹಮಯಿ ಕೃಷ್ಣ ಏನು ಸತ್ಯ ಹರಿಶ್ಚಂದ್ರ ನಾ..? ನ್ಯಾಯಾಲಯದಲ್ಲಿ ಹೋರಾಟ ಮಾಡಲು ಇವನಿಗೆ ಎಲ್ಲಿಂದ ಬರುತ್ತೆ ಹಣ.? ಒಬ್ಬೊಬ್ಬ ವಕೀಲರಿಗೂ ಲಕ್ಷಗಟ್ಟಲೇ ಫೀಸು ಕೊಡಬೇಕು. ಈ ಹಣವನ್ನು ಈತ ಹೇಗೆ ಪೂರೈಸುತ್ತಾನೆ ಎಂದು ಲಕ್ಷ್ಮಣ್ ಶಂಕೆ ವ್ಯಕ್ತಪಡಿಸಿದರು.
ಬಿಜೆಪಿಯವರು ಬೆಂಗಳೂರಿಂದ ಪಾದಯಾತ್ರೆ ಮಾಡಿದ್ರು, ಇಲ್ಲಸಲ್ಲದ ಆರೋಪ ಮಾಡಿದ್ರು . ಈಗ ಒಂದೊಂದಾಗಿ ನಮಗೆ ಈ ಪ್ರಕರಣದಲ್ಲಿ ಗೆಲುವು ಸಿಗುತ್ತಿದೆ. ಈಗಲಾದರೂ ಸಿಎಂ ಕುಟುಂಬಸ್ಥರ ಮೇಲೆ ಆರೋಪ ಮಾಡುವುದನ್ನ ಕೈ ಬಿಡಬೇಕು. ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿಕೆ.
key words: Snehamayi Krishna, Satya Harishchandra, congress, M. Laxman, muda
Snehamayi Krishna, what is Satya Harishchandra? : Congress spokesperson M. Laxman