ಯದುವೀರ್ ಮೂಲತಃ ರಾಜವಂಶಸ್ಥರಲ್ಲ: ಪಿಕೆಟಿಬಿ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ಇಟ್ಟೇ ಇಡ್ತೇವೆ- ಎಂ.ಲಕ್ಷ್ಮಣ್

ಮೈಸೂರು,ಜನವರಿ,1,2025 (www.justkannada.in):  ರಾಜವಂಶಸ್ಥರ ಮೇಲೆ ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಸಂಸದ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್  ಆರೋಪಕ್ಕೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಯದುವೀರ್ ಮೂಲತಃ ರಾಜ ವಂಶಸ್ಥರಲ್ಲ. ಅವರು ಮೈಸೂರು ಅರಮನೆಗೆ ದತ್ತು ಪುತ್ರ. ಕಾಂಗ್ರೆಸ್ ಪಕ್ಷವು ನಿಜವಾದ ವರಿಜಿನಲ್ ರಾಜ ವಂಶಸ್ಥರಾದ ಶ್ರೀಕಂಠನದತ್ತ ನರಸಿಂಹ ರಾಜ ಒಡೆಯರ್ ಗೆ ನಾಲ್ಕು ಬಾರಿ ಟಿಕೆಟ್ ಕೊಟ್ಟು ಸಂಸದರನ್ನಾಗಿ ಮಾಡಿದೆ. ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದ ಬಿಜೆಪಿ ಪಕ್ಷಕ್ಕೆ ಹೋಗಿ ಯದುವೀರ್ ಸೇರಿಕೊಂಡಿದ್ದಾರೆ. ನಾವೇನು ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ನೂರಕ್ಕೆ ನೂರು ಸಿದ್ದರಾಮಯ್ಯ ಅವರ ಹೆಸರು ಇಟ್ಟೇ ಇಡುತ್ತೇವೆ

ಪಿಕೆಟಿಬಿ ರಸ್ತೆಗೆ  ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಪಿಕೆಟಿಬಿ ರಸ್ತೆಗೆ ಪ್ರಿನ್ಸಸ್ ರಸ್ತೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಪಾಲಿಕೆಯಲ್ಲಿ ಇಲ್ಲ. ಒಂದು ವೇಳೆ ದಾಖಲೆ ಇದ್ದರೆ ತೋರಿಸಲಿ. ನೂರಕ್ಕೆ ನೂರು ಸಿದ್ದರಾಮಯ್ಯ ಅವರ ಹೆಸರು ಇಟ್ಟೇ ಇಡುತ್ತೇವೆ. ಸೂಕ್ತ ದಾಖಲೆಗಳು ಇದ್ದರೆ ಪ್ರಿನ್ಸಸ್ ರಸ್ತೆ ಎಂದು ಮುಂದುವರೆಸಲು ನಮ್ಮ ಅಭ್ಯಂತರ ಇಲ್ಲ. ಈಗ ಅದಕ್ಕೆ ಸಂಬಂಧಪಟ್ಟ ದಾಖಲೆ ಇಲ್ಲದ ಕಾರಣ ನಾವು ಸಿದ್ದರಾಮಯ್ಯ ಅವರ ಹೆಸರಿಡಲು  ಹೊರಟಿದ್ದೇವೆ. ಅದಕ್ಕೆ ಯಾವ ದೊಣ್ಣೆನಾಯಕರ ಅನುಮತಿಯೂ ಬೇಕಿಲ್ಲ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

Key words: Yaduveer, duplicate royal, M. Laxman