ಪ್ರಿಯಾಂಕ್ ಖರ್ಗೆ ಪರ ಬ್ಯಾಟಿಂಗ್: ಬಿಜೆಪಿ ನಾಯಕರ ಕೇಸ್ ಗಳನ್ನು ಪ್ರಸ್ತಾಪಿಸಿ ಎಂ. ಲಕ್ಷ್ಮಣ್ ವಾಗ್ದಾಳಿ

ಮೈಸೂರು,ಜನವರಿ,1,2025 (www.justkannada.in):  ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಅಗ್ರಹಿಸಿದ ಬಿಜೆಪಿ ನಾಯಕರಿಗೆ ಅವರ ಕೇಸ್ ಗಳನ್ನು ಪ್ರಸ್ತಾಪಿಸಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆಗೆ ವಿಪಕ್ಷಗಳ ಆಗ್ರಹ ಹಿನ್ನಲೆ, ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಪ್ರಿಯಾಂಕ್ ಖರ್ಗೆ ಒಬ್ಬ ವೆರಿ ಆ್ಯಕ್ಟಿವ್ ಪರ್ಸನ್. ಉತ್ತಮವಾಗಿ ಕೆಲಸ ಮಾಡುವ ಮಾಡುವ ಸಚಿವರಲ್ಲಿ ಒಬ್ಬರು. ಬಿಜೆಪಿ ವಿರುದ್ಧ ಬಹಳ ಅಗ್ರೆಸಿವ್ ಆಗಿ ಮಾತನಾಡುವ ಪ್ರಿಯಾಂಕ್ ಖರ್ಗೆ. ಸಚಿನ್ ಸಾವಿನ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರ ಇದೆ ಎಂಬ ಬಿಜೆಪಿ ಅವರ ಆರೋಪ ಸತ್ಯಕ್ಕೆ ದೂರವಾದ್ದು. ಹಾಗೇನಾದರೂ ಅವರ ಪಾತ್ರ ಇದೆ ಅಂತಾದರೆ ಯಾವುದಾದರೂ ಒಂದು ದಾಖಲೆ ಇದ್ದರೆ ತೋರಿಸಿ. ಇದಕ್ಕೆಲ್ಲ ಪ್ರಿಯಾಂಕ್ ಖರ್ಗೆ ಜಗ್ಗುವರಲ್ಲ ಎಂದರು.

ಡೆತ್ ನೋಟ್ ನಲ್ಲಿ ಎಲ್ಲೂ ಕೂಡ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ. ಡೆತ್ ನೋಟ್ ನಲ್ಲಿ ರಾಜು ಕಪನೂರ ಇವನು ಬಿಜೆಪಿ ಮುಖಂಡ ಜೊತೆ ಇದ್ದಾನೆ. ಅಲ್ಲಿನ‌ ನಗರದ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್ ಆಪ್ತ. ಬಿಜೆಪಿ ಕಾರ್ಯಕ್ರಮಗಳಲ್ಲಿ ಇದ್ದ ವ್ಯಕ್ತಿ ರಾಜು ಕಪನೂರ. ಈತ ಒಬ್ಬ ರೌಡಿ ಶೀಟರ್ ಅವನು ಈಗ ಪ್ರಿಯಾಂಕ್ ಖರ್ಗೆ ಜೊತೆ ಫೋಟೋ ತೆಗೆಸಿದ್ದ ಕಾರಣಕ್ಕೆ ಅವರ ರಾಜಿನಾಮೆ ಕೇಳೋದು ಸರಿನಾ.? ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ದಲಿತರನ್ನ ಕಂಡರೆ ಆಗಲ್ಲ. ಅವರ ಮೇಲೆ ಏನಾದರೂ ಮಾಡಿ ಕಳಂಕ ತರಲು ಕಾಯುತ್ತಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಮೇಲು ಕೂಡ ದ್ವೇಷ ಕಾರುತ್ತಾರೆ. ಬಿಜೆಪಿ,ಆರ್ಎಸ್ಎಸ್ ನವರ ಚೆಡ್ಡಿ ತಲೆ ಮೇಲೆ ಇಟ್ಟುಕೊಂಡವನನ್ನ ಮುಂದೆ ಬಿಟ್ಟು  ಕಾಂಗ್ರೆಸ್ ನಾಯಕರ ವಿರುದ್ಧ  ಮಾತನಾಡಿಸುತ್ತಿದ್ದಾರೆ ಎಂದು  ಪರೋಕ್ಷವಾಗಿ ಛಲವಾದಿ ನಾರಾಯಣ ಸ್ವಾಮಿ ಹೆಸರೇಳೆದೆ ಎಂ.ಲಕ್ಷ್ಮಣ್ ಕಿಡಿಕಾರಿದರು.

ಬಯೋಟೆಕ್ನಲಾಜಿಯಲ್ಲಿ ಸುಮಾರು 10 ಸಾವಿರ ಕೋಟಿ ಹೂಡಿಕೆಯನ್ನು ಪ್ರಿಯಾಂಕ್ ಖರ್ಗೆ ತಂದಿದ್ದಾರೆ. ಗ್ರಾಮೀಣಾಭಿವೃದ್ಧಿಯಲ್ಲಿ ಅಪಾರವಾದ ಬದಲಾವಣೆಗಳನ್ನ ತಂದು ಸರ್ಕಾರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅದನ್ನ ಸಹಿಸದೆ ಬಿಜೆಪಿ ನಾಯಕರು ಹೊಟ್ಟೆ ಉರಿಯಿಂದ ಈ ರೀತಿ ಅವರ ತೇಜೋವಧೆ ಮಾಡುತ್ತಿದ್ದಾರೆ. ಆರ್.ಅಶೋಕ್ ಮಗ ಶರತ್  ಬಳ್ಳಾರಿಯಲ್ಲಿ ಒಂದು ಅಪಘಾತ ಮಾಡಿ ನಾಲ್ವರ ಸಾಯಿಸಿದ ಕೇಸನ್ನೇ ಮುಚ್ಚಿ ಹಾಕಿದ್ರಲ್ಲ ಆಗ ನೀವು ರಾಜಿನಾಮೆ ಕೊಟ್ರಾ.? ಕುಣಿಗಲ್ ಬಳಿ ಸಿಟಿ ರವಿ ಇದ್ದ ಕಾರು ಅಪಘಾತ ಮಾಡಿ ನಾಲ್ವರ ಸಾವಿಗೆ ಕಾರಣರಾದರಲ್ಲ ಆಗ ರಾಜಿನಾಮೆ ಕೊಟ್ಟಿದ್ರಾ.? ಎಂದು  ಬಿಜೆಪಿ ನಾಯಕರ ಅಪರಾಧ ಕೇಸ್ ಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

ಆಡಳಿತ ನಡೆಸುವುದಕ್ಕೆ ಪದೆ ಪದೆ  ಮೂಗು ತೂರಿಸುವುದನ್ನ ಬಿಡಬೇಕು. ಸಿ.ಟಿ ರವಿ ಮಾಡಿರುವ ಮೂರ್ಖ ಕೆಲಸ ರಾಜ್ಯದ ಜನರಿಗೆ  ಗೊತ್ತು. ತಲೆಗೆ ಪಟ್ಟಾಗಿದೆ ಎಂದು ಬಟ್ಟೆ ಕಟ್ಟಿಕೊಂಡು ನಾಟಕ ಮಾಡಿದ್ದು ಜನರಿಗೆ ಗೊತ್ತು. ಈಗ ದಿನ ಬೆಳಗಾದರೆ ಸರ್ಕಾರದ ವಿರುದ್ಧ ವಿನಾ ಕಾರಣ ಆಡಳಿತ ನಡೆಸಲು ಅಡ್ಡಿ ಮಾಡುತ್ತೀರಾ.? ನಿಮಗೆ ಏನಾದರೂ ಮಾನ ಮರ್ಯಾದೆ ಇದೆಯಾ.? ಎಂದು ಎಂ.ಲಕ್ಷ್ಮಣ್ ಗುಡುಗಿದರು.

Key words: Priyank Kharge, M. Laxman, BJP leaders, cases