ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ ಕೇಸ್: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ದ ದೂರು

ಮಂಡ್ಯ,ಫೆಬ್ರವರಿ,12,2025 (www.justkannada.in): ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ ಎಸ್‌ಎಸ್‌ ಕಾರ್ಯಕರ್ತರೇ ವೇಷ ಧರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ದ ಮಂಡ್ಯದಲ್ಲಿ ದೂರು ನೀಡಲಾಗಿದೆ.

ಕೆರೆಗೋಡು ಪೊಲೀಸ್ ಠಾಣೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್  ವಿರುದ್ದ ಹಿಂದೂ ಕಾರ್ಯಕರ್ತರು ದೂರು ನೀಡಿದ್ದಾರೆ. ಹನುಮ ಧ್ವಜ ಸಮಿತಿ ಸದಸ್ಯರು ದೂರು ಸಲ್ಲಿಕೆ ಮಾಡಿದ್ದು, ದೇಶಭಕ್ತ ಆರ್‌ಎಸ್‌ಎಸ್ ಸಂಘಟನೆ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಲಕ್ಷ್ಮಣ್ ವಿರುದ್ದ ಎಫ್ ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆ ಮೇಲೆ ಆರ್‌ಎಸ್‌ಎಸ್‌ ಕಾರ್ಯಕರ್ತರು ವೇಷಧರಿಸಿ ಕಲ್ಲೆಸೆದಿದ್ದಾರೆ. 50 ಕ್ಕೂ ಹೆಚ್ಚು RSS ಕಾರ್ಯಕರ್ತರು ಗುಂಪಿನೊಂದಿಗೆ ಸೇರಿ ದಾಂಧಲೆ ನಡೆಸಿದ್ದಾರೆ. ಆರ್‌ಎಸ್‌ಎಸ್‌ ಹುನ್ನಾರದಿಂದಲೇ ಗಲಭೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ ನೀಡಿದ್ದರು.

Key words: Complaint, against, KPCC spokesperson, M. Laxman