ಗಲಾಟೆ ಹಿಂದೆ ಆರ್.ಎಸ್.ಎಸ್ ಕೈವಾಡ: ನನ್ನ ಮಾತಿಗೆ ನಾನು ಈಗಲೂ ಬದ್ಧ- ಎಂ.ಲಕ್ಷ್ಮಣ್

ಮೈಸೂರು,ಫೆಬ್ರವರಿ,13,2025 (www.justkannada.in): ಉದಯಗಿರಿ ಗಲಾಟೆ ಪ್ರಕರಣ ಸಂಬಂಧ ನಾನು ಈಗಲೂ ಹೇಳುತ್ತಿದ್ದೇನೆ. ಈ ಗಲಾಟೆ ಹಿಂದೆ ಆರ್.ಎಸ್.ಎಸ್ ಕೈವಾಡವಿದೆ.  ನನ್ನ ಮಾತಿಗೆ ನಾನು ಈಗಲೂ ಬದ್ಧ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪೊಲೀಸ್ ನವರು ಎಫ್ಐಆರ್ ದಾಖಲು ಮಾಡಿದ್ದಾರೆ. ಅಪ್ರಾಪ್ತ ವ್ಯಕ್ತಿ ಸೇರಿ ಒಂದು ಸಾವಿರ ಜನರ ಮೇಲೆ ಎಫ್ ಐಆರ್ ಆಗಿದೆ. ಹಲವರನ್ನ ವಶಕ್ಕೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಎಷ್ಟು ಜನರನ್ನ ಅರೆಸ್ಟ್ ಮಡುತ್ತಾರೆ ಎಂಬ ಮಾಹಿತಿ ಇಲ್ಲ. ಪೊಲೀಸ್ ಠಾಣೆ ಮುಂಭಾಗ ಒಂದು ಸಾವಿರ ಇದ್ದರಾ. ಅಷ್ಟು ಜನ ಇದ್ದರು ಎಂಬುದಕ್ಕೆ ನಿಮ್ಮ ಬಳಿ ಮಾಹಿತಿ ಇದೆಯಾ. ಅಲ್ಲಿ ನೆರೆದಿದ್ದ ಜನರ ಪೈಕಿ ಒಂದು ಸಾವಿರ ಜನ ಇರಲೇ ಇಲ್ಲ ಎಂದು ತಿಳಿಸಿದರು.

ಘಟನೆ ಸಂಬಂಧ ಬೆಳಿಗ್ಗೆ 10.30ಕ್ಕೆ ದೂರು ಕೊಡಲು ಬಂದಾಗ  ದೂರು ತೆಗೆದುಕೊಂಡಿಲ್ಲ. ವಿಪಕ್ಷ ನಾಯಕರು ಮಾಜಿ ಎಂಎಲ್ ಎ ಗಳು ಪೊಲೀಸ್ ಠಾಣೆ ಒಳಗೆ ಸಭೆ ಮಾಡ್ತಾರೆ. ಪೊಲೀಸ್ ಠಾಣೆ ಒಳಗೆ ಸಭೆ ಮಾಡಲು ಅವಕಾಶ ಇದೆಯಾ. ನಮ್ಮನ್ನ ಯಾಕೆ ಒಳಗೆ ಬಿಡಲಿಲ್ಲ. ಜನ ಸಾಮಾನ್ಯರಿಗೆ ಈ ವಿಚಾರವಾಗಿ ಗೊಂದಲ ಇದೆ. ಪೊಲೀಸರು ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು. ಯಾರೇ ಗಲಾಟೆ ಮಾಡಿದ್ರು ಕ್ರಮ ಜರುಗಿಸಲಿಕ್ಕೆ ನಮ್ಮ ಅಭ್ಯಂತರ ಇಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ರನ್ನ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಧರ್ಮದ ಬಗ್ಗೆ ಅವಹೇಳನ ಮಾಡಲಾಗಿದೆ. ಸುರೇಶ್ ಎಂಬಾತ ಆರ್ ಎಸ್ಎಸ್ ಗೆ ಸೇರಿದ ವ್ಯಕ್ತಿ. ಉದಯಗಿರಿ ಠಾಣೆ ಗಲಾಟೆಗೆ ಕಾರಣರಾಗಿರೋದು ಸುರೇಶ್ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಜೋಕರ್ಸ್.

ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ ಜೋಕರ್ಸ್. ಆರ್ ಎಸ್ಎಸ್ ಚಡ್ಡಿಯನ್ನ ತೊಳಿಯಲಿಕ್ಕೆ ನಿಮ್ಮನ್ನ ಇಟ್ಟುಕೊಂಡಿದ್ದಾರೆ. ಛಲವಾದಿ ನಾರಾಯಣ್ ಗೆ ಎಂ.ಎಲ್.ಸಿ ಸ್ಥಾನ ಕೊಟ್ಟಿರೋದು ಆರ್.ಎಸ್.ಎಸ್ ನಾ ಚಡ್ಡಿ ಹೊತ್ತು ಓಡಾಡಲು. ಕಾಂಗ್ರೆಸ್ ನಾಯಕರನ್ನ ಬೈಯಲು ನಿಮ್ಮನ್ನ ಇರಿಸಿಕೊಳ್ಳಲಾಗಿದೆ. ಎಲ್ಲಿಗೆ ಬೇಕಾದರೂ ನಾನು ಬರ್ತೀನಿ ಬನ್ನಿ. ನಿಮಗೆ ಉತ್ತರ ಕೊಡುವ ಕೆಲಸ ಮಾಡುತ್ತೇನೆ. ಈ ಕೇಸ್ ನಲ್ಲಿ ಪೊಲೀಸರು ಒನ್ ಸೈಡ್ ಮಾಡಬಾರದು ಎಂದು ಹೇಳಿದರು.

ಅರೆಸ್ಟ್ ಮಾಡಿರುವ 15ಜನರ ಪೈಕಿ ಕೆಲವರು ಮುಗ್ದರು

ಬಂಧಿತ ಆರೋಪಿಗಳ ಪರ ಬ್ಯಾಟ್ ಬೀಸಿದ ಎಂ. ಲಕ್ಷ್ಮಣ್, ಸುರೇಶ್ ಹಿಂದೆ ಯಾರಿದ್ದಾರೆ ಎಂಬುದರ ತನಿಖೆ ಆಗಬೇಕು. ಸುರೇಶ್ ರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ನನ್ನನ್ನು ಕೂಡ ತನಿಖೆ ಮಾಡಬೇಕು ಅಂತ ಕೆಲವರು ಒತ್ತಾಯ ಮಾಡಿದ್ದಾರೆ. ನನ್ನನ್ನು ಕೂಡ ಮಂಪರು ಪರೀಕ್ಷೆ ಮಾಡಲಿ. ಈಗ ಪೊಲೀಸರು ಅರೆಸ್ಟ್ ಮಾಡಿರುವ 15ಜನರ ಪೈಕಿ ಕೆಲವರು ಮುಗ್ದರು ಇದ್ದಾರೆ. ನನಗೆ ಅವರ ಬಗ್ಗೆ ಮಾಹಿತಿ ಇದೆ. ವಿಪಕ್ಷ ನಾಯಕ ಆರ್ ಅಶೋಕ್ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಆರ್ ಅಶೋಕ್ ಧಮ್ಕಿಗೆ ಹೆದರಿ ಪೊಲೀಸರು ಎಫ್ ಐಆರ್ ಹಾಕಿದ್ದಾರೆ ಎಂದು ಆರೋಪಿಸಿದರು.

Key words: Mysore, RSS, behind, riots, M. Laxman