ಮುಡಾ ಕೇಸ್ ನಲ್ಲಿ ಸಿಎಂಗೆ ಕ್ಲೀನ್ ಚಿಟ್: ಇನ್ನಾದ್ರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ನಿಲ್ಲಿಸಲಿ- ಎಂ.ಲಕ್ಷ್ಮಣ್

ಮೈಸೂರು,ಫೆಬ್ರವರಿ,19,2025 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಕೆಗೆ ಮುಂದಾಗಿದ್ದು ಸಿಎಂ ಸಿದ್ದರಾಮಯ್ಯ ಸೇರಿ ನಾಲ್ವರು ಆರೋಪಿಗಳಿಗೆ ಕ್ಲಿನ್ ಚಿಟ್ ಸಿಗಲಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಇನ್ನಾದರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ಮಾಡೋದನ್ನ ನಿಲ್ಲಿಸಬೇಕು ಎಂದಿದ್ದಾರೆ.

ಲೋಕಾಯುಕ್ತಾ ಬಿ ರಿಪೋರ್ಟ್ ಸಲ್ಲಿಕೆ ಹಿನ್ನೆಲೆ, ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್  ಅವರು ಸತ್ಯಮೇವ ಜಯತೆ, ಸತ್ಯಕ್ಕೆ ಜಯ ಎಂದು ನಾಮ ಫಲಕ ಹಿಡಿದು ಲೋಕಾಯುಕ್ತ ಕಚೇರಿ ಬಳಿಗೆ ಆಗಮಿಸಿದರು.

ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ಈಗ ಪ್ರಕರಣಕ್ಕೆ  ಸಂಬಂಧಿಸಿದಂತೆ ಲೋಕಾಯುಕ್ತಾ ಬಿ.ರಿಪೋರ್ಟ್ ಕೊಟ್ಟಿದೆ. ಸೂಕ್ತ ದಾಖಲೆ, ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯವರಿಗೆ  ಕ್ಲೀನ್ ಚೀಟ್ ಕೊಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ ಎಂದು ಲೋಕಾಯುಕ್ತಾ ವರದಿ ಹೇಳುತ್ತಿದೆ ಎಂದರು.

ಈ ಪ್ರಕರಣ ಕ್ರಿಮಿನಲ್ ಪ್ರಕರಣ ಅಲ್ಲವೇ ಅಲ್ಲ. ಇದೊಂದು ಸಿವಿಲ್ ಪ್ರಕರಣ. ಸೂಕ್ತ ಸಾಕ್ಷ್ಯಾಧಾರಗಳನ್ನ ನೀವು ಕೊಟ್ಟಿಲ್ಲ ಅಂತ ಲೋಕಾಯುಕ್ತಾ ಪೋಲಿಸರು ಈಗ ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟೀಸ್ ಕೊಟ್ಟಿದ್ದಾರೆ. ಇದು ಬಿಜೆಪಿ ಜೆಡಿಎಸ್ ಷಡ್ಯಂತ್ರ.  ಇವರು ಏನೇ ಷಡ್ಯಂತ್ರ ಮಾಡಿದರೂ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ ಅಂತ ಈಗಾಗಲೇ ಲೋಕಾಯುಕ್ತಾ ವರದಿ ಹೇಳುತ್ತಿದೆ. ಇನ್ನಾದರೂ ಸ್ನೇಹಮಯಿ ಕೃಷ್ಣ ವ್ಯರ್ಥ ಪ್ರಯತ್ನ ಮಾಡೋದನ್ನ ನಿಲ್ಲಿಸಬೇಕು ಎಂದು ಎಂ.ಲಕ್ಷ್ಮಣ್ ಟಾಂಗ್ ಕೊಟ್ಟರು.

Key words: Clean chit ,  CM , Muda case,  Snehamayi Krishna, M. Laxman