ಸ್ನೇಹಮಯಿ ಕೃಷ್ಣ ವಿರುದ್ದ ಎಂ.ಲಕ್ಷ್ಮಣ್ ಮತ್ತೊಂದು ದೂರು: ಬಂಧನಕ್ಕೆ ಆಗ್ರಹ

ಮೈಸೂರು,ನವೆಂಬರ್,16,2024 (www.justkannada.in): ಸಿಎಂ ಸಿದ್ದರಾಮಯ್ಯ ಅವರು ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ಆರೋಪಿಸಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ದೂರು ದಾಖಲಿಸಿದ್ದಾರೆ.

ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ಬಂದು ಸ್ನೇಹಮಯಿ ಕೃಷ್ಣ ವಿರುದ್ದ  ಕೆಪಿಸಿಸಿ ವಕ್ತಾರ ಎಂ.ಲಕ್ಷಣ್‌ ದೂರು ಸಲ್ಲಿಸಿದ್ದಾರೆ.  ಬಳಿಕ ಮಾತನಾಡಿದ ಅವರು, ಸ್ನೇಹಮಹಿ ಕೃಷ್ಣ ರೌಡಿಶೀಟರ್, ಆತನ ಮೇಲೆ 44 ಕೇಸ್ ಗಳಿವೆ. ಆತನ ಮೇಲೆ‌ ಮೂರುವರೆ ವರ್ಷಗಳಿಂದ ಯಾವುದೇ ಸೆಕ್ಯೂರಿಟಿ ಕೇಸ್ ಹಾಕಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡ್ತಿದ್ದಾನೆ. ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ. ಈತನನ್ನ ಕೂಡಲೇ ಅರೆಸ್ಟ್ ಮಾಡಬೇಕು. ರೌಡಿಶೀಟರ್ ಆಗಿರುವ ಈತ ಸಿಎಂ ಪತ್ನಿ ಪಾರ್ವತಿ ಅವರ  ಹೆಸರಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ. ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರು ದಾಖಲೆ  ಎಲ್ಲಾ ಸುಳ್ಳು. ಆತ ಬಿಡುಗಡೆ ಮಾಡಿರುವ ದಾಖಲೆ ಸುಳ್ಳು ಅಂತಾ ಮುಡಾ ಅಧಿಕಾರಿಗಳೇ ಹೇಳುತ್ತಿದ್ದಾರೆ.  ಸ್ನೇಹಮಯಿ ಕೃಷ್ಣನನ್ನ ಕೂಡಲೇ  ಬಂಧಿಸಬೇಕು. ಅರೆಸ್ಟ್ ಮಾಡದಿದ್ದರೆ ನಾಳೆಯಿಂದ ಪೋಲಿಸ್ ಠಾಣೆ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದರು.

ಸ್ನೇಹಮಹಿ ಕೃಷ್ಣ ವಿರುದ್ಧ 22 FIR ಕಾಫಿ ದಾಖಲೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್.

ತಾಕತ್ ಇದ್ರೆ ನನ್ನ ವಿರುದ್ಧ ಎಫ್ಐಆರ್ ಬಿಡುಗಡೆ ಮಾಡಲಿ ಎಂದಿದ್ದ ಸ್ನೇಹಮಯಿ ಕೃಷ್ಣ‌ಗೆ ತಿರುಗೇಟು ನೀಡಿರುವ ಎಂ.ಲಕ್ಷ್ಮಣ್ ಇದೀಗ ಸ್ನೇಹಮಹಿ ಕೃಷ್ಣ ವಿರುದ್ಧ 22 ಎಫ್ಐಆರ್ ಕಾಫಿ ದಾಖಲೆ ಬಿಡುಗಡೆ ಮಾಡಿದ್ದಾರೆ

ಆತ ರೌಡಿ ಒಬ್ಬ ಶೀಟರ್, ಕೊಲೆ,ವಂಚನೆ, ಬ್ಲಾಕ್ ಮೇಲ್ ಸೇರಿದಂತೆ ಹಲವು ಕೇಸ್ ಗಳು ಅವನ ಮೇಲೆ ಇವೆ ಆದರೂ ಪೋಲಿಸರು ಆತನನ್ನು ಅರೆಸ್ಟ್ ಮಾಡಲು ಮೀನಾ ಮೇಷ ಎಣಿಸುತ್ತಿದ್ದಾರೆ ನಾವು ನಮ್ಮ ಸರ್ಕಾರದ ಪ್ರಭಾವ ಬಳಿಸಿ ಆತನಿಗೆ ಏನು ಬೇಕಾದರೂ ಮಾಡಬಹುದಿತ್ತು. ಆದರೆ, ನಾವು ಆ ಕೆಲಸ ಮಾಡಲ್ಲ.  ನಾವು ಕಾನೂನಿನ ಮೇಲೆ ಗೌರವ ಇಟ್ಟು ಬಿಟ್ಟಿದ್ದೇವೆ. ಕಾನೂನಾತ್ಮಕವಾಗಿ ಪೋಲಿಸರು ಏನು ಮಾಡಬೇಕು ಮಾಡುತ್ತಾರೆ ಎಂದರು.

Key words: M. Laxman, Another, complaint, against, Snehamai Krishna