ಆರ್.‌ ಅಶೋಕ್‌ ಒಮ್ಮೆ ಅರೋಗ್ಯ ಪರೀಕ್ಷಿಸಿಕೊಂಡರೆ ಒಳ್ಳೆಯದು:  ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ 

It would be better if R. Ashok gets himself checked once: Congress spokesperson M Laxman 

ಮೈಸೂರು, ಮಾ.೨೫,೨೦೨೫:  ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೂ ಎಚ್ಐವಿ ಇಂಜೆಕ್ಷನ್ ಕೊಟ್ಟಿರಬಹುದು. ಅಶೋಕ್ ಅವರ ದೈಹಿಕ ಬಣ್ಣ , ತುಟಿ, ಕೈ ಬಣ್ಣ ಬದಲಾಗುತ್ತಿದೆ. ಬಿಜೆಪಿ ಶಾಸಕ ಮುನಿರತ್ನ ಎಚ್ಐವಿ ಇಂಜೆಕ್ಷನ್ ಕೊಟ್ಟಿರಬಹುದು.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್  ಈ ಹೇಳಿಕೆ ನೀಡಿದರು. ಒಟ್ಟಾರೆ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ್‌ ಹೇಳಿದಿಷ್ಟು…

ಬಿಜೆಪಿ ಮುಖಂಡ, ವಿಪಕ್ಷ ನಾಯಕರಾಗಿರುವ ಆರ್.‌ ಅಶೋಕ್‌ ಅವರ ತುಟಿಯ ಬಣ್ಣ ಬಿಳಿ ಬಣ್ಣಕ್ಕೆ ತಿರುಗಿದೆ. ಒಮ್ಮೆ ಅರೋಗ್ಯ ಪರೀಕ್ಷಿಸಿಕೊಂಡರೆ ಒಳ್ಳೆಯದು. ಶಾಸಕ ಮುನಿರತ್ನ ಹೆಚ್ಐವಿ ಇಂಜೆಕ್ಷನ್ ನೀಡಿರಬೇಕು. ಯಾವುದೊ ಹೆಣ್ಣು ಮಗಳ ಮೂಲಕ ಕೊಡಿಸಿರಬಹುದು. ಒಮ್ಮೆ ಆರ್ ಅಶೋಕ್ ಅರೋಗ್ಯ ಪರೀಕ್ಷಿಸಿಕೊಳ್ಳಲಿ. ಬಿಜೆಪಿ ನಾಯಕರ ಸುಮಾರು 200 ಸಿಡಿಗಳು ಇರಬಹುದು. ಸಿಡಿಯ ಮಹಾನಾಯಕ ಶಾಸಕ ಮುನಿರತ್ನ. ಆತ ಹಲವರಿಗೆ ಹೆಚ್ಐವಿ ಇಂಜೆಕ್ಷನ್ ಕೊಟ್ಟಿದ್ದಾನೆ. ಬಾಂಬೇ ಬಾಯ್ಸ್ ಸಿಡಿಯೂ ಇರಬಹುದು. ಮೈಸೂರಿನ ವಿಧಾನಪರಿಷತ್ ಸದಸ್ಯರ ಸಿಡಿಯು ಇರಬಹುದು. ಮೈಸೂರಿನ‌ಲ್ಲಿ ಕಾಂಗ್ರೆಸ್ ವಕ್ತಾರ  ಎಂ ಲಕ್ಷ್ಮಣ್ ಸ್ಪೋಟಕ ಹೇಳಿಕೆ.

key words:  R. Ashok, Congress spokesperson, M Laxman, munirathna, HIV, injection

summary: 

It would be better if R. Ashok gets himself checked once: Congress spokesperson M Laxman.

Opposition leader R Ashoka may also have been administered HIV injection. Ashok’s body colour, lips and hand colour are changing. BJP MLA Munirathna may have been given HIV injection.