ಬೆಂಗಳೂರು,ಡಿಸೆಂಬರ್,18,2020(www.justkannada.in) : ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ಶಾಸಕ ಜಮೀರ್ ಅಮೀರ್ ಸಲ್ಲಿಸಿದ್ಧ ದೂರನ್ನ ಚಾಮರಾಜಪೇಟೆ ವಿಶೇಷ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ.
ಶಾಸಕ ಜಮೀರ್ ಅಹಮದ್ ಖಾನ್ ದಾಖಲಿಸಿರುವ ಖಾಸಗಿ ದೂರನ್ನು ನಗರದ ಜನಪ್ರತಿನಿಧಿಗಳ ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಲ್ಲಿಸಲು ದೂರದಾರರಿಗೆ ಸೂಚಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಡಿ.23ಕ್ಕೆ ನಿಗದಿಪಡಿಸಿದೆ.
ರೇಣುಕಾಚಾರ್ಯ ಅವರು ಕಳೆದ 4-5 ವರ್ಷಗಳಿಂದ ತಮ್ಮನ್ನು ದೇಶದ್ರೋಹಿ, ಗುಂಡು ಹಾರಿಸಿ ಕೊಲೆ ಮಾಡಬೇಕು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಇತ್ತೀಚೆಗೆ ನಗರದ ಪಾದರಾಯನಪುರದಲ್ಲಿ ಕೊರೋನಾ ಕಾರ್ಯಕರ್ತರ ಮೇಲೆ ನಡೆದ ದಾಳಿ ಘಟನೆಗೂ ಜಮೀರ್ ಕಾರಣ ಎಂಬ ಸುಳ್ಳು ಆರೋಪ ಮಾಡಿದ್ದಾರೆ.
ಜೊತೆಗೆ, ತಮ್ಮನ್ನು ಮತಾಂಧ, ದೇಶದ್ರೋಹಿ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಕ್ಷೇತ್ರದ ಮತದಾರರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗುತ್ತಿದೆ. ಅದ್ದರಿಂದ ರೇಣುಕಾಚಾರ್ಯ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಲಿಸಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದರು.
ಐಪಿಸಿ ಸೆಕ್ಷನ್ 153ಎ( ಸಮುದಾಯಗಳ ನಡುವೆ ದ್ವೇಷ ಭಾವ ಮೂಡಿಸುವುದು), 500(ಮಾನಹಾನಿ), 504(ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಪ್ರಚೋದನೆ ನೀಡುವುದು) ಮತ್ತು 506(ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಜಮೀರ್ ಪರ ವಕೀಲರು ಮನವಿ ಮಾಡಿದ್ದಾರೆ.
key words : M.P.Renukaacharya-Criminal-case-against-Request-record-Inquiry-into-December.23