ಬೆಂಗಳೂರು, ಜುಲೈ 04, 2021 (www.justkannada.in): ಸರಕಾರದ ಹೊಸ ಮಾರ್ಗಸೂಚಿಯಂತೆ ನಾಳೆಯಿಂದ (ಜು.5) ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯವನ್ನು ಭಕ್ತಾದಿಗಳ ಪ್ರವೇಶಕ್ಕೆ ತೆರೆಯಲಾಗುತ್ತದೆ.
ಈ ಸಂಬಂಧ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ತಪ್ಪದೇ ಎಲ್ಲ ಭಕ್ತಾದಿಗಳು ಪಾಲಿಸಬೇಕೆಂದು ತಿಳಿಸಿದೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವ ಸ್ವಾಮಿ ಈ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ಹೊರಡಿಸಿದ್ದಾರೆ.
1. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ದೇವರದರ್ಶನ ವ್ಯವಸ್ಥೆ ಇರುತ್ತದೆ.
2. ದಾಸೋಹ ವ್ಯವಸ್ಥೆ ಇರುವುದಿಲ್ಲ.
3. ತೀರ್ಥಪ್ರಸಾದ ಇರುವುದಿಲ್ಲ.
5. ಯಾವುದೇ ಸೇವೆಗಳು ಹಾಗೂ ಉತ್ಸವಗಳು ನಡೆಯುವುದಿಲ್ಲ.
6. ಮುಡಿ ಸೇವೆ ಇರುವುದಿಲ್ಲ.
7. ಪ್ರಾಧಿಕಾರದ ಬಸ್ಸುಗಳು ಓಡುವುದಿಲ್ಲ. ಬೇಡಿಕೆಗನುಸಾರ ಬಸ್ ಓಡಿಸುವ ಬಗ್ಗೆ ಪರಿಶೀಲಿಸಲಾಗುವುದು.
8. ಎಲ್ಲ ಭಕ್ತಾದಿಗಳು ಮಾಸ್ಕ್ ಪೂರ್ಣವಾಗಿ ಧರಿಸಿ ಬರುವುದು.
9. ಎಲ್ಲ ಭಕ್ತಾದಿಗಳು ಕಡ್ಡಾಯವಾಗಿ ರಂಗಮಂದಿರಕ್ಕೆ ಬಂದು ಕೋವಿಡ್ ಮಾರ್ಗಸೂಚಿಯಂತೆ ವ್ಯವಸ್ಥೆ ಮಾಡಲಾಗುವ ಆಸನಗಳಲ್ಲಿ ಕುಳಿತುಕೊಂಡು/ಕ್ಯೂ ಲೈನ್ ನಲ್ಲಿ ನಿಂತುಕೊಂಡು ತಮ್ಮ ಸರದಿ ಬಂದಾಗ ದೇವಾಲಯದ ಒಳಭಾಗದ ಕ್ಯೂ ಲೈನಿನಲ್ಲಿ ಸಹಾ ನಿಗಧಿಪಡಿಸಲಾದ ಮಾರ್ಚ್ನಲ್ಲಿ ನಿಂತು ನೂಕುನುಗ್ಗಲಿಗೆ ಅವಕಾಶ ನೀಡದೇ, ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಲು ಕೋರಿದೆ.
10. ಯಾವುದೇ ಸಂದೇಹಗಳಿದ್ದಲ್ಲಿ ದಿ. 04/7/2021ರಿಂದ ದೇವಾಲಯದ ಸಹಾಯವಾಣಿ ಸಂಖ್ಯೆ
1860 425 4350 ಅನ್ನು ಸಂಪರ್ಕಿಸಲು ಕೋರಿದೆ.
11. ಈ ಮಾರ್ಗಸೂಚಿಯು ಈ ದೇವಾಲಯಕ್ಕೆ ಮಾತ್ರ ಸೀಮಿತಗೊಂಡಿರುತ್ತವೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಚಾಮರಾಜನಗರ ಜಿಲ್ಲೆರವರೊಂದಿಗೆ ಚರ್ಚಿಸಿ ಮೌಖಿಕ ಸಹಮತಿ ಪಡೆದು ಹೊರಡಿಸಿದೆ.
12. ದೇವಾಲಯದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಎಲ್ಲರೂ ಸಹಕರಿಸಲು ಕೋರಿದೆ. ತ್ಯಾಜ್ಯ ವಸ್ತುವನ್ನು ನಿಗಧಿತ ಕಸದ ಡಬ್ಬಿಯಲ್ಲೇ ಹಾಕಿರಿ.