ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿದ್ಧ ಜೆಡಿಎಸ್ ಶಾಸಕ ಈಗ ಯುಟರ್ನ್.

ತುಮಕೂರು,ನವೆಂಬರ್,24,2022(www.justkannada.in): ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಿದ್ಧ ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದ ಜೆಡಿಎಸ್ ಶಾಸಕ  ವೀರಭದ್ರಯ್ಯ ಇದೀಗ ಯುಟರ್ನ್ ಹೊಡೆದಿದ್ದಾರೆ.

ಹೌದು , ಪಕ್ಷದ ವರಿಷ್ಠರು, ನಾಯಕರು, ಕಾರ್ಯಕರ್ತರ ಒತ್ತಾಯ ಹಿನ್ನೆಲೆ  ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಾಸಕ  ವೀರಭದ್ರಯ್ಯ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಕೆಲವು ಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದವರು ಸಹ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು.  ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನ ಮಾಡಿದ್ದೆ. ಆದರೇ ನಾನು ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.

ಹೆಚ್.ಡಿ ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿ ಸಹ ನನ್ನ ಜೊತೆ ಮಾತನಾಡಿದ್ದಾರೆ.  ವರಿಷ್ಠರು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡುತ್ತೇನೆ . ಹೆಚ್.ಡಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡುವುದೇ ನಮ್ಮ ಗುರಿ  ಎಂದು ಶಾಸಕ ವೀರಭದ್ರಯ್ಯ ತಿಳಿಸಿದ್ದಾರೆ.

Key words: madhugiri-JDS- MLA – contest – next election- U turn.

ENGLISH SUMMARY..

“U-Turn by JDS MLA who had said he wouldn’t contest in next election
Tumakuru, November 24, 2022 (www.justkannada.in): Tumakuru District Madhugiri Assembly Constituency JDS MLA Veerbhadraiah, who had earlier declared that he wouldn’t contest in the next elections has taken a U-turn.
Veerbhadraiah has informed he has reconsidered his decision following pressure from party heads, leaders, and activists. “I had decided not to contest in the election due to several reasons. Even my family members had asked me to stay away. However, our activists are demanding I contest now. Party supremo H.D. Deve Gowda and H.D. Kumaraswamy also have spoken to me. Hence, yielding to the pressure of the party leaders and activists I have reconsidered my earlier decision. I aim to make H.D. Kumaraswamy the Chief Minister,” he said.
Keywords: JDS/ MLA/ Veebhadraiah/ election/ contest/ U-turn