ಕೊಡಗು,ಫೆ,15,2020(www.justkannada.in): ಬೇಸಿಗೆಯ ಸಮಯದಲ್ಲಿ, ಹೆಚ್ಚು ಬಿಸಿಲು ಇದ್ದಾಗ ಬಾಯಾರಿಕೆ, ದಾಹ ತಣಿಸಿಕೊಳ್ಳಲು ಎಲ್ಲರೂ ಐಸ್ ಕ್ರೀಮ್, ಕುಲ್ಫಿ ಮೊರೆಹೋಗುವುದು ಸಾಮಾನ್ಯ. ಈ ನಡುವೆ ಕುಲ್ಫಿ ತಿನ್ನುವ ವೇಳೆ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿರುವ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಆವಂದೂರಿನಲ್ಲಿ ಈ ಘಟನೆ ನಡೆದಿದೆ. ರಮ್ಯ ಎಂಬುವವರು ಕುಲ್ಫಿಯನ್ನ ಖರೀದಿ ಮಾಡಿ ತಿನ್ನುವ ವೇಳೆ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿದೆ. ತಿನ್ನುವ ವೇಳೆ ನಾಲಿಗೆಗೆ ಗೀಚಿದ ಪರಿಣಾಮ ಮಹಿಳೆ ಎಚ್ಚೆತ್ತುಕೊಂಡ ಪರಿಣಾಮ ದುರಂತ ತಪ್ಪಿದೆ.
ಈ ಕುಲ್ಫಿ ಐಸ್ ಕ್ರೀಂ ನಾಪೋಕ್ಲುವಿನ ಅಶ್ರಫ್ ತಿಂಡಿ ತಯಾರಿಕೆ ಘಟಕದಲ್ಲಿ ತಯಾರಾಗಿದ್ದು, ಕುಲ್ಫಿ ತಯಾರಿಸುವ ವೇಳೆ ಅಲ್ಲಿನ ತಯಾರಕರು ಬೇಜವಬ್ದಾರಿತನ ಮೆರೆದಿದ್ದಾರೆ. ಹೀಗಾಗಿ ಇಂತಹ ಘಟನೆ ನಡೆದಿದ್ದು ಇನ್ನು ಕುಲ್ಫಿ, ಐಸ್ ಕ್ರೀಂ ತಿನ್ನುವ ಮೊದಲು ಎಲ್ಲರೂ ಎಚ್ಚರವಹಿಸಬೇಕಿದೆ.
Key words: madikeri- Be careful- before- eating -kulfi.