ಮೈಸೂರು,ಡಿಸೆಂಬರ್,17,2024 (www.justkannada.in): ಮೈಸೂರಿನಲ್ಲಿ ಅರಮನೆ ಆಡಳಿತ ಮಂಡಳಿ ವತಿಯಿಂದ ಡಿಸೆಂಬರ್ 21 ರಂದು ಮಾಗಿ ಉತ್ಸವವನ್ನು ಆಯೋಜನೆ ಮಾಡಲಾಗಿದೆ.
ಮೈಸೂರು ಅರಮನೆ ಆವರಣದಲ್ಲಿ ಮಾಗಿ ಉತ್ಸವ ನಡೆಯಲಿದ್ದು, ಡಿಸೆಂಬರ್ 21ಕ್ಕೆ ಚಾಲನೆ ಸಿಗಲಿದೆ.
ಮಾಗಿ ಉತ್ಸವಕ್ಕೆ ಅರಮನೆ ಮಂಡಳಿ ಸಕಲ ಸಿದ್ಧತೆ ಕೈಗೊಂಡಿದ್ದು, ವಿವಿಧ ಬಗೆಯ ಹೂ ಕುಂಡಗಳನ್ನ ನಿರ್ಮಾಣ ಮಾಡಲಾಗಿದೆ. ಅರಮನೆ ಆವರಣದ ಪಾರ್ಕ್ ನಲ್ಲಿ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.
ದೆಹಲಿಯ ಅಕ್ಷರಧಾಮ, ನಂಜನಗೂಡು ಶ್ರೀಕಂಠ ದೇವಾಲಯ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ, ಮುಮ್ಮಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಬಂಡೀಪುರ ಅರಣ್ಯ ಪ್ರದೇಶ ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳ ಕಲಾಕೃತಿ ನಿರ್ಮಾಣ ಮಾಡಲಾಗಿದೆ.
ಬೆಳಿಗ್ಗೆ ಸಂಜೆ ಎರಡು ಸಮಯದಲ್ಲೂ 60 ಕ್ಕೂ ಹೆಚ್ಚು ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಕೇರಳ, ಬೆಂಗಳೂರು, ಇತರೆ ದೇಶಗಳಿಂದಲೂ ವಿವಿಧ ಬಗೆಯ ಹೂಗಳನ್ನ ಖರೀದಿ ಮಾಡಲಾಗಿದೆ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪ್ರವಾಸಿಗರನ್ನ ಮಾಗಿ ಉತ್ಸವ ಆಕರ್ಷಸಲಿದೆ. ಮೈಸೂರಿನ ಉಮಾಶಂಕರ್ ನೇತೃತ್ವದಲ್ಲಿ ಕಲಾ ಕೃತಿಗಳು ನಿರ್ಮಾಣವಾಗುತ್ತಿದ್ದು, ಕಾರ್ಮಿಕರು ಕಲಾ ಕೃತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
Key words: Magi Festival , Mysore, December 21st