ಮೈಸೂರು,ಡಿಸೆಂಬರ್,20,2024 (www.justkannada.in): ನಾಳೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಗಿ ಉತ್ಸವ ನಡೆಯಲಿದ್ದು ಇದಕ್ಕಾಗಿ ಮೈಸೂರು ಅರಮನೆ ಮಂಡಳಿ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೈಸೂರು ಅರಮನೆ ಆವರಣದಲ್ಲಿ ಡಿಸೆಂಬರ್ 21ರಿಂದ ಡಿ.31 ರವರೆಗೆ 11 ದಿನಗಳ ಕಾಲ ನಡೆಯಲಿರುವ ಈ ಮಾಗಿ ಉತ್ಸವ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಪ್ರವಾಸಿಗರನ್ನ ಆಕರ್ಷಿಸಲಿದೆ.
ಮಾಗಿ ಉತ್ಸವಕ್ಕೆ ಈಗಾಗಲೇ ಸಿದ್ದತಾ ಕಾರ್ಯ ಭರದಿಂದ ಸಾಗುತ್ತಿದ್ದು, ಕಾರ್ಮಿಕರು ಹಲವು ಕಲಾಕೃತಿಗಳ ನಿರ್ಮಾಣ ಮಾಡುತ್ತಿದ್ದಾರೆ. ಕಲಾಕೃತಿಗಳ ನಿರ್ಮಾಣಕ್ಕೆ ಲಕ್ಷಾಂತರ ಅಲಂಕಾರಿಕ ಹೂಗಳನ್ನು ಬಳಕೆ ಮಾಡಲಾಗುತ್ತಿದೆ.
ಮಾಗಿ ಉತ್ಸವಕ್ಕೆ ಈ ಭಾರಿ ಟಿಕೇಟ್ ದರ ನಿಗದಿ ಮಾಡಲಾಗಿದ್ದು ವಯಸ್ಕರು, ವಿದೇಶಿಗರಿಗೆ 30 ರೂ, 10 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ 20 ರೂ. 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿ ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದೆ.
Key words: Magi festival, Mysore, tomorrow