ಪ್ರಯಾಗ್ ರಾಜ್ ,ಫೆಬ್ರವರಿ,26,2025 (www.justkannada.in): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ಧೂರಿಯಾಗಿ ನೆರವೇರಿದ ಈ ವಿಶ್ವ ವಿಖ್ಯಾತ ಮಹಾಕುಂಭಮೇಳಕ್ಕೆ ಇಂದು ತೆರೆ ಬೀಳಲಿದೆ.
ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದಿಂದ ಪ್ರಾರಂಭವಾದ ಮಹಾಕುಂಭಮೇಳದಲ್ಲಿ ಇಲ್ಲಿಯವರೆಗೂ 64 ಕೋಟಿ ಭಕ್ತರು ಭೇಟಿ ಕೊಟ್ಟು ಪುಣ್ಯಸ್ನಾನ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಕೊನೆಯ ದಿನದ ಅಮೃತಸ್ನಾನ ನಡೆಯಲಿದ್ದು 1ಕೋಟಿ ಭಕ್ತರು ಅಮೃತಸ್ನಾನ ಮಾಡುವ ಸಾಧ್ಯತೆ ಇದೆ. ಅದ್ಧೂರಿ ಉತ್ಸವಕ್ಕೆ ಇಂದು ತೆರೆ ಬೀಳಲಿದ್ದು, ಭಾರಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.
Key words: Maha KumbhMela, 64 crore, people, holy dip