ಬೆಂಗಳೂರು,ಮಾರ್ಚ್,11,2021(www.justkannada.in): ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ಕ್ಷೇತ್ರದ ವಿವಿಧ ಶಿವ ದೇವಾಲಯಗಳಿಗೆ ತೆರಳಿ ಭಗವಂತನ ದರ್ಶನ ಪಡೆದು ವಿಶೇಪ ಪೂಜೆ ಸಲ್ಲಿಸಿದರು.
ಮಲ್ಲೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಕಾಡುಮಲ್ಲೇಶ್ವರ ಮತ್ತು ಯಶವಂತಪುರದ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಸ್ಥಾನ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿದ ಡಿಸಿಎಂ ಅಶ್ವಥ್ ನಾರಾಯಣ್, ಇಡೀ ನಾಡಿಗೆ ಶುಭವಾಗಲಿ, ಪರಮ ಶಿವನ ಕೃಪೆ ಎಲ್ಲರಿಗೂ ಇರಲಿ ಎಂದು ಪ್ರಾರ್ಥಿಸಿದರು.
ಕಾಡು ಮಲ್ಲೇಶ್ವರ ದೇವಾಲಯದ ಬಳಿ ಮಾಧ್ಯಮಗಳ ಜತೆ ಮಾತನಾಡುತ್ತ ಶಿವರಾತ್ರಿ ಸಂಭ್ರಮವನ್ನು ಹಂಚಿಕೊಂಡ ಡಿಸಿಎಂ ಅಶ್ವಥ್ ನಾರಾಯಣ್, ಶಿವಪ್ಪ ಎಲ್ಲರಿಗೂ ಒಲಿಯುವ ದೈವ. ಕಾಡು ಮಲ್ಲೇಶ್ವರ ದೇವಾಲಯಕ್ಕೆ ಬೆಂಗಳೂರು ಮಾತ್ರವಲ್ಲದೆ ನಾಡಿನ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ ಎಂದರು.
ಇದೊಂದು ಐತಿಹಾಸಿಕ ದೇವಾಲಯ. ಬಾಲ್ಯದಿಂದಲೂ ನಾನು ಇಲ್ಲಿಗೆ ಬರುತ್ತಲೇ ಇದ್ದೇನೆ. ಇವತ್ತು ಇಲ್ಲಿಯೇ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಜನರ ಆಶೀರ್ವಾದ ಮತ್ತು ಕಾಡು ಮಲ್ಲೇಶ್ವರ ಸ್ವಾಮಿಯ ಕೃಪೆಯಿಂದ ಇದೆಲ್ಲ ಸಾಧ್ಯವಾಗಿದೆ ಎಂದ ಡಿಸಿಎಂ ಅಶ್ವಥ್ ನಾರಾಯಣ್, ನಾಳೆ (ಶುಕ್ರವಾರ) ಇಲ್ಲಿ ಅದ್ಧೂರಿಯಾಗಿ ಕಾಡು ಮಲ್ಲೇಶ್ವರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಎಲ್ಲರೂ ರಥೋತ್ಸವವನ್ನು ಕಣ್ತುಂಬಿಕೊಳ್ಳಬೇಕು ಎಂದು ಕೋರಿದರು.
ಜತೆಗೆ ಡಿಸಿಎಂ ಅಶ್ವಥ್ ನಾರಾಯಣ್ ಅವರು ಮತ್ತಿಕೆರೆಯ ಈಶ್ವರ ದೇವಸ್ಥಾನ, ಗುಟ್ಟಹಳ್ಳಿಯ ಶನೇಶ್ವರ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಮಂಜುನಾಥ ರಾಜು ಸೇರಿದಂತೆ ಇತರರು ಇದ್ದರು.
Key words: Maha Shivaratri-DCM -Ashwath Narayan – worshipe -temple