ಬೆಳಗಾವಿ,ಫೆ,13,2020(www.justkannada.in): ಮಹದಾಯಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧ ನಾನು ಇನ್ನು ಸಚಿವರಾಗಿ ಚಾರ್ಜ್ ತೆಗೆದುಕೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ನೋಡಿಕೊಳ್ತಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಹದಾಯಿ ಯೋಜನೆ ಜಾರಿ ಕುರಿತು ಮಾಧ್ಯಮಗಳು ಇಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಮೇಶ್ ಜಾರಕಿಹೊಳಿ, ಈ ಸಂಬಂಧ ಅಧಿಕಾರಿಗಳು ನೋಡಿಕೊಳ್ತಾರೆ. ಸಚಿವರು ಕಾನೂನು ಹೋರಾಟ ಮಾಡಲ್ಲ. ವಕೀಲರು, ಇಲಾಖೆ ಅಧಿಕಾರಿಗಳು ಕಾನೂನು ಹೋರಾಟ ಮಾಡುತ್ತಾರೆ. ನಾಳೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಮಹೇಶ್ ಕುಮುಟಳ್ಳಿಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿಗೆ ನಿಗಮ ಮಂಡಳಿ ನೀಡಿದ್ದಾರೆ. ಆದರೆ ಅದನ್ನ ಬೇಡ ಅಂದ್ರಂತೆ. ಬೇಡ ಅಂದ್ರೆ ಬೇಡ ಬೀಡಿ. ಮಹೇಶ್ ಕುಮುಟಳ್ಳಿ ಹೇಳಿದ್ದಕ್ಕೆ ಸಚಿವನಾಗಿದ್ದೇನೆ ಎಂದು ಹೇಳಿದರು.
Key words: Mahadai Scheme-Minister- Ramesh jarakiholi -charge