ನವದೆಹಲಿ,ಫೆಬ್ರವರಿ,13,2023(www.justkannada.in): ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದ್ದು, ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಮಹಾದಾಯಿ ಕಾಮಗಾರಿ ಪ್ರಶ್ನಿಸಿ ಗೋವಾ ಸಲ್ಲಿಸಿದ್ಧ ಅರ್ಜಿಯನ್ನ ನ್ಯಾ. ಸಂಜೀವ್ ನೇತೃತ್ವದ ಪೀಠ ವಜಾಗೊಳಿಸಿದೆ. ಮಹಾದಾಯಿ ಯೋಜನೆ ಡಿಪಿಆರ್ ಮತ್ತು ಕೇಂದ್ರಸರ್ಕಾರದ ಕ್ರಮದ ಬಗ್ಗೆಯೂ ಗೋವಾ ಪ್ರಶ್ನಿಸಿತ್ತು.
ಇದೀಗ ಅರ್ಜಿ ವಜಾಗೊಂಡಿದ್ದು ಯೋಜನೆಗೆ ಅಡ್ಡಗಾಲು ಹಾಕುವ ಗೋವಾ ಪ್ರಯತ್ನ ವಿಫಲವಾಯಿತು. ಇತ್ತೀಚೆಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿಯಾಗಿದ್ದರು. ಮಹದಾಯಿ ಯೋಜನೆ ಸ್ಥಗಿತಕ್ಕೆ ಕರ್ನಾಟಕಕ್ಕೆ ಸೂಚಿಸುವಂತೆ ಮನವಿ ಮಾಡಿದ್ದರು.
Key words: Mahadayi-dispute-Supreme Court-dismissed -Goa’s- petition