ಗೋವಾ,ಜನವರಿ,30,2021(www.justkannada.in): ಮಹಾರಾಷ್ಟ್ರ ಗಡಿ ಖ್ಯಾತೆ ಬಳಿಕ ಇದೀಗ ಮಹಾದಾಯಿ ವಿಚಾರದಲ್ಲಿ ಗೋವಾ ಖ್ಯಾತೆ ತೆಗೆದಿದೆ. ಹೌದು, ಮಹಾದಾಯಿ ವಿಚಾರದಲ್ಲಿ ಪಕ್ಷದ ಮಾತು ಕೇಳಿ ರಾಜಿಯಾಗುವ ಮಾತೇ ಇಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ಧಾರೆ.
ಗೋವಾ ವಿಧಾನಸಭಾ ಕಲಾಪದಲ್ಲಿ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಮಹಾದಾಯಿ ಗೋವಾ ಜೀವನದಿ. ನನಗೆ ತಾಯಿ ಸಮಾನ. ಕೇಂದ್ರ, ಕರ್ನಾಟಕ ಮತ್ತು ಗೋವಾದಲ್ಲಿ ನಮ್ಮ ಬಿಜೆಪಿ ಸರ್ಕಾರವಿದೆ. ಆದರೆ ನಾನು ಪಕ್ಷ ರಾಜಕೀಯ ಬದಿಗಿಟ್ಟು ಮಹಾದಾಯಿ ನೋಡುವೆ. ಈ ವಿಚಾರದಲ್ಲಿ ಪಕ್ಷದ ಮಾತು ಕೇಳಿ ರಾಜಿಯಾಗುವ ಮಾತೇ ಇಲ್ಲ ಎಂದು ತಮ್ಮ ಪಕ್ಷದ ವಿರುದ್ಧವೇ ಗುಟುರು ಹಾಕಿದ್ದಾರೆ.
ಹಾಗೆಯೇ ಮಹಾದಾಯಿ ವಿಚಾರದಲ್ಲಿ ಯಾರ ಜೊತೆಯೋ ರಾಜಿಯಾಗುವುದಿಲ್ಲ. ಪಕ್ಷದಲ್ಲಿ ಯಾರೇ ಒತ್ತಡ ತಂದರೂ ಅದನ್ನ ನಾನು ಒಪ್ಪುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ENGLISH SUMMARY…
I won’t listen to anyone regarding Mahadayi issue: Goa CM
Goa, Jan. 30, 2021 (www.justkannada.in): After Maharashtra border row, it is now the turn of Goa. Regarding the Mahadayi issue, Goa Chief Minister Pramod Sawant has said that he won’t compromise based on his party opinion.
Speaking in the assembly, the Goa Chief Minister said, “Mahadayi River is the lifeline of Goa, and it is like my mother. BJP is in power at the center, Karnataka, and also in Goa. But I look at Mahadayi by keeping aside the party. I won’t compromise at any cost listening to my party opinion.”
He also said that he won’t budge to any pressure, either by the party or by any other person.
Keywords: Mahadayi issue/ Goa Chief Minister Pramod Sawant/ wont’ compromise
Key words: mahadayi –issue-party -not compromise-Goa CM – Pramod savanth