ದಸರಾದ ಎಲ್ಲಾ ಆಹ್ವಾನ ಪತ್ರಿಕೆಯಲ್ಲೂ ಮೈಸೂರು ಮಹಾರಾಜರ ಭಾವಚಿತ್ರ ಕಡ್ಡಾಯ- ಸಚಿವ ವಿ,ಸೋಮಣ್ಣ ಆದೇಶ…

ಮೈಸೂರು,ಆ,26,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ  ಎಲ್ಲಾ ಆಹ್ವಾನ ಪತ್ರಿಕೆಯಲ್ಲೂ ಮೈಸೂರು ಮಹಾರಾಜರ ಭಾವಚಿತ್ರ ಕಡ್ಡಾಯವಾಗಿ ಹಾಕುವಂತೆ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಚಿವ ವಿ,ಸೋಮಣ್ಣ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಈ ಆದೇಶ ಮಾಡಿದ್ದೇನೆ. ಮಹಾರಾಜರನ್ನು ಗೌರವಿಸುವುದು ನಮ್ಮ ಕರ್ತವ್ಯ. ಆ ಪರಂಪರೆ ಇಲ್ಲದೆ ದಸರಾ ಇಲ್ಲ. ಹೀಗಾಗಿ ಆಹ್ವಾನ ಪತ್ರಿಕೆ ಅವರ ಭಾವಚಿತ್ರ ಹಾಕಿ ಗೌರವ ನೀಡಲು ಆದೇಶಿಸಿದ್ದೇನೆ ಎಂದರು.

ರಾಮದಾಸ್‌ ಅಸಮಾಧಾನ ಒಪ್ಪಿಕೊಂಡ ಉಸ್ತುವಾರಿ ಸಚಿವ ವಿ.ಸೋಮಣ್ಣ.

ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್‌ ಗೆ ಅಸಮಾಧಾನ ಇರುವುದನ್ನ ಉಸ್ತುವಾರಿ ಸಚಿವ ಸೋಮಣ್ಣ ಒಪ್ಪಿಕೊಂಡಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ವಿ,ಸೋಮಣ್ಣ, ಗಜಪಡೆ ಸ್ವಾಗತಕ್ಕೆ ಅವರನ್ನು ಆಹ್ವಾನಿಸಲು ಬೆಳಗ್ಗೆಯಿಂದ ದೂರವಾಣಿ ಮಾಡುತ್ತಿದ್ದೇನೆ. ಅವರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. 28ರಂದು ಮತ್ತೆ ಮೈಸೂರಿಗೆ ಬರುತ್ತೇನೆ. ಅಂದು ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವೋಲಿಸುತ್ತೇನೆ. ಇದು ವರ್ಷಕ್ಕೊಮ್ಮೆ ಬರುವ ನಾಡಹಬ್ಬ.ಎಲ್ಲರು ಒಟ್ಟಾಗಿ ಹಬ್ಬ ಆಚರಿಸಬೇಕು ಎಂಬುದು ನಮ್ಮ ಆಸೆ. ಮುನಿಸು ಬಿಟ್ಟು ಮುಂದಿನ ಕಾರ್ಯಕ್ರಮಗಳಿಗೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.

Key words: Maharaja –photo- Mysore – compulsory -Dasara invitations-Minister V, Somanna