ವಿಜಯಪುರ,ಫೆಬ್ರವರಿ,18,2021(www.justkannada.in): ಗಡಿ ವಿಚಾರ ಕುರಿತು ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಮತ್ತೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ.
ಮಹಾರಾಷ್ಟ್ರ ಸರಕಾರದ ಕನ್ನಡ ತುಳಿಯುವ ಹೊಸ ತಂತ್ರಗಾರಿಗೆ ಎಣೆದಿದೆ. ಮತ್ತೆ ಗಡಿ ಭಾಗದ ಕನ್ನಡಿಗರ ಮೇಲೆ ದಬ್ಬಾಳಿಕೆ ಶುರು ಮಾಡಿದ್ದು, ಗಡಿಭಾಗದಲ್ಲಿ ಯಾವ ಯಾವ ಗ್ರಾಮ ಪಂಚಾಯತಿಗಳಲ್ಲಿ ಕನ್ನಡ ಪ್ರಾಬಲ್ಯವಿದೆಯೋ ಆ ಹಳ್ಳಿಗಳಲ್ಲಿ ಮರಾಠಿ ಭಾಷೆಯ ಪ್ರಚಾರ ಮಾಡಬೇಕು. ಯಾವ ಊರಲ್ಲಿ 50% ಕ್ಕೂ ಮರಾಠಿ ಪ್ರಾಭಲ್ಯವಿದೆಯೋ ಅಲ್ಲಿ ಬಿಟ್ಟು, ಇನ್ನೂಳಿದ ಗ್ರಾಮಪಂಚಾಯತಿಗಳಿಗೆ 50% ಗಿಂತ ಹೆಚ್ಚಿಗೆ ಮರಾಠಿಮಯ ಮಾಡುವಂತೆ ಪತ್ರದ ಮೂಲಕ ಸೂಚಿಸಿದೆ.
ಈ ಕುರಿತು ಪತ್ರ ಬರೆದು ತಿಳಿಸಿರುವ ಮಹಾರಾಷ್ಟ್ರ ಸರ್ಕಾರ, ಸಂವಿದಾನ ಕೊಟ್ಟ (ಆರ್ಟಿಕಲ್ 364 ಎ ) ಭಾಷಾ ಅಲ್ಪಸಂಖ್ಯಾತರ ಹಕ್ಕನ್ನು ಕಸಿಯುತ್ತಿರುವ ಪ್ರಯತ್ನ ಮಾಡಿದೆ. ಜತ್, ಅಕ್ಕಲಕೋಟ ಹಾಗೂ ದಕ್ಷಿಣ ಸೋಲಾಪುರ ತಾಲೂಕಿನ ಕನ್ನಡಿಗರ ಮೇಲೆ ಮರಾಠಿ ಹೇರಿಸುವಂತೆ ಒತ್ತಾಯ ಮಾಡುವ ಹುನ್ನಾರ ನಡೆಸಿದೆ. ಗಡಿ ಭಾಗದ ಕನ್ನಡಿಗರಿಂದ ಮರಾಠಿ ಹೇರಿಕೆ ಮಾಡಲು ಹೊರಟಿಸುವ ಮಹಾ ಸರಾಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Key words: Maharashtra CM -Uddhav Thackeray –karnataka-outrage