ಬೆಂಗಳೂರು,ಡಿಸೆಂಬರ್,5,2022(www.justkannada.in): ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಕಾಲಿಡಲು ಬಿಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಈ ಕುರಿತು ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಕ್ಯಾತೆ ತೆಗೆಯೋದೆ ಮಹಾರಾಷ್ಟ್ರ ಕಾರ್ಯವಾಗಿದೆ. ರಾಜ್ಯದ ಒಂದಿಂಚು ಜಾಗವನ್ನ ಬಿಡಲ್ಲ. ಕಾನೂನು ಸುವ್ಯವಸ್ಥೆ ಹದಗೆಡಿಸಲು ಮುಂದಾದ್ರೆ ಕ್ರಮ ವಹಿಸುತ್ತೇವೆ ಎಂದರು.
ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬರಲು ಬಿಡಲ್ಲ. ಎಂಇಎಸ್ ವರ್ಚಸ್ಸು ಕಡಿಮೆ ಆಗುತ್ತಿದೆ. ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ. ಮಹಾಜನ್ ವರದಿ ಅಂತಿಮ ಎಂದು ಕೋರ್ಟ್ ಹೇಳಿದೆ. ದಾಖಲೆ ಜನಾಭಿಪ್ರಾಯ ಎಲ್ಲವೂ ನಮ್ಮ ಕಡೆಯೇ ಇದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ನೆಲ ಜಲ ಬಾಷೆ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧ. ಸಚಿವರ ಭೇಟಿಗೆ ಪ್ರತಿಯಾಗಿ ನಾವು ರಣತಂತ್ರ ಮಾಡಿದ್ದೇವೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇವೆ ಎಂದು ಸಚಿವ ಅಶೋಕ್ ತಿಳಿಸಿದರು.
Key words: Maharashtra -ministers -not allowed – Belgaum – Minister -R. Ashok