ನವದೆಹಲಿ,ಜೂನ್,24,2022(www.justkannada.in): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟು ಉಂಟಾಗಿದ್ದು ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಬೀಳುವ ಹಂತಕ್ಕೆ ತಲುಪದೆ. ಇನ್ನು ಸರ್ಕಾರದ ವಿರುದ್ಧ ಬಂಡಾಯವೆದ್ದು ಅಸ್ಸಾಂನ ಹೋಟೆಲ್ ನಲ್ಲಿ ಶಿವಸೇನೆ ರೆಬಲ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಬಿಜೆಪಿ ಉಸ್ತುವಾರಿ ಸಿ.ಟಿ ರವಿ, ಮಹಾರಾಷ್ಟ್ರದಲ್ಲಿ ನಾವ್ಯಾರು ಅಪರೇಷನ್ ಕಮಲ ಮಾಡಿಲ್ಲ. ಸರ್ಕಾರಕ್ಕೆ ಅಭಿವೃದ್ಧಿಯೇ ಅಜೇಂಡಾವಾಗಿರಲಿಲ್ಲ. ಹೀಗಾಗಿ ಎಂವಿಎ ಕೆಟ್ಟ ಆಡಳಿತದಿಂದ ಬಂಡೆದಿದ್ದಾರೆ. ಸರ್ಕಾರಕ್ಕೆ ಜನ ಹಿಡಿ ಶಾಪ ಹಾಕಿದ್ದಾರೆ. ಶಿವಸೇನೆ-ಎನ್ ಸಿಪಿ ಮೈತ್ರಿಯೇ ಮಿಸ್ ಮ್ಯಾಚ್ ಎಂದು ಟೀಕಿಸಿದ್ದಾರೆ.
ಸಚಿವ ಏನಕಾಥ ಸಿಂಧೆ ಅಮಾಯಕರಲ್ಲ. ಪಕ್ಷದ ನಾಯಕ. ಎಲ್ಲಾ ಕಾಲದಲ್ಲೂ ಶರದ್ ಪವಾರ ಆಟ ನಡೆಯಲ್ಲ . ಕೆಲವೊಮ್ಮೆ ತುಪ್ಪ ಜಾರಿ ರೊಟ್ಟಿಗೆ ಬೀಳಲ್ಲ. ತಿಪ್ಪೆಗೆ ಬೀಳುತ್ತೆ. ಪಾಪದ ಕೊಡ ತುಂಬಿದೆ. ಎಂವಿಎ ಸರ್ಕಾರ ಬಿದ್ದು ಹೋಗಿದೆ. ಶಿವಸೇನೆ ಶಾಸಕರನ್ನ ಬಚ್ಚಿಡಲು ಅವರೇನು ಕೋಳಿ ಮರಿಗಳಲ್ಲ ಎಂದು ಸಿ.ಟಿ ರವಿ ಟಾಂಗ್ ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಇಂಗು ತಿಂದ ಮಂಗನಂತಾಗಿತ್ತು ಮಹಾರಾಷ್ಟ್ರದಲ್ಲು ಕೂಡ ಹಾಗೆಯೇ ಆಗಲಿದೆ. ಮೈತ್ರಿ ಇಷ್ಟು ದಿನ ಬದುಕಿದ್ದೇ ಪುಣ್ಯ ಎಂದು ಲೇವಡಿ ಮಾಡಿದರು.
Key words: Maharashtra- ShivSena-NCP –alliance- Miss Match- CT Ravi