ಮೈಸೂರು,ಫೆಬ್ರವರಿ,16,2021(www.justkannada.in) : ಮಹಾರಾಷ್ಟ್ರ ಕೆಲ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿ ಕದಂಬ ಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಬಾಂಬೆ, ಔರಂಗಾಬಾದ್, ಸೊಲ್ಲಾಪುರ, ಕೊಲ್ಲಾಪುರ, ಪಂಡರಾಪುರ, ಜತ್ತ, ಸಾಂಗ್ಲಿ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಲಾಯಿತು.
ಮಹಾರಾಷ್ಟ್ರದಲ್ಲಿ ಶೇ.40ಕ್ಕೂ ಹೆಚ್ಚು ಕನ್ನಡವನ್ನು ಮಾತನಾಡುವ ಕನ್ನಡ ಭಾಷಿಕರು ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಹಿಂದೆ ಮಹಾರಾಷ್ಟ್ರ ಕೆಲ ಪ್ರಾಂತ್ಯಗಳಲ್ಲಿ ಕನ್ನಡ ಭಾಷೆ ಬಳಸುತ್ತಿದ್ದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಪುಂಡಾಟ ನಿಲ್ಲಿಸಬೇಕು. ಪುಂಡಾಟ ನಿಲ್ಲಿಸದಿದ್ದಲ್ಲಿ ಎಂಇಎಸ್ ಹಾಗೂ ಶಿವಸೇನೆಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಪ್ರತಿಭಟನಾಕಾರರ ಎಚ್ಚರಿಕೆ ನೀಡಿದರು.
key words : Maharashtra-Some-areas-Karnataka-Protest-include