ಬೆಂಗಳೂರು,ಡಿಸೆಂಬರ್,7,2022(www.justkannada.in): ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ, ಎರಡು ರಾಜ್ಯಗಳ ನಡುವೆ ಸಂಘರ್ಷದ ಬದಲು ಸಂಬಂಧ ಗಟ್ಟಿಯಾಗಬೇಕು. ಯಾವುದೇ ಪ್ರಚೋದನಕಾರಿ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ದೇವೆಂದ್ರ ಫಡ್ನಾವೀಸ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಮಾತುಕತೆಯಾಗಿದೆ . ಸಂಘರ್ಷದ ಬದಲು ಸಂಬಂಧ ಗಟ್ಟಿಯಾಗಬೇಕು. ಸೌಹಾರ್ದತೆ ಕಾಪಾಡಬೇಕಾಗಿದ್ದು ನಮ್ಮ ಜವಾಬ್ದಾರಿ. ಯಾವುದೇ ಪ್ರಚೋಧನಕಾರಿ ಕೆಲಸ ಮಾಡಬಾರದು.
ವಾಹನಗಳಿಗೆ ಮಸಿ ಬಳಿಯೋ ಕೆಲಸ ಮಾಡಬೇಡಿ. ವಾಹನ ಕರ್ನಾಟಕ ಅಥವಾ ಮಹಾರಾಷ್ಟ್ರ ಯಾವುದೇ ಆಗಲಿ, ವಾಹನಗಳಿಗೆ ಮಸಿ ಬಳಿದರೇ ಪ್ರಚೋದನೆಯಾಗುತ್ತೆ ಎರಡು ರಾಜ್ಯಗಳೂ ಸೌಹಾರ್ದತೆ ಕಾಪಾಡಬೇಕು. ಗಡಿ ವಿವಾದ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ನುಡಿದರು.
Key words: maharastra-karnataka- border-dispute- CT Ravi