ಮಹಾತ್ಮ ಗಾಂಧಿ ಚಿಂತನೆಗಳು ಸದಾ ನಮ್ಮೊಳಗೆ ಜೀವಂತ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಆಗಸ್ಟ್,15,2021(www.justkannada.in): ಮಹಾತ್ಮ ಗಾಂಧೀಜಿ ಇಂದು ನಮ್ಮೊಡನೆ ಇಲ್ಲ. ಆದರೆ, ಅವರ ಚಿಂತನೆಗಳು ಹಾಗೂ ಆದರ್ಶಗಳು ಸದಾ ನಮ್ಮೊಳಗೆ ಜೀವಂತವಾಗಿರುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ, ಗಾಂಧಿ ಅಧ್ಯಯನ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ತೋಟಗಾರಿಕೆ ವಿಭಾಗದ ವತಿಯಿಂದ  75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಪ್ರಯುಕ್ತ ಮಾನಸ ಗಂಗೋತ್ರಿ ಗಾಂಧಿ ಭವನದ ಆವರಣದಲ್ಲಿ 75 ಗಿಡ ನೆಡುವ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಅವರು ತಮ್ಮ ಅಸಾಧಾರಣವಾದ ವ್ಯಕ್ತಿತ್ವ ಮತ್ತು ಚಿಂತನೆಗಳಿಂದ ಜಗತ್ತನ್ನು ಸೂಜಿಗಲ್ಲಿನಂತೆ ಸೆಳೆದವರು. ಸತ್ಯ, ಅಹಿಂಸೆ, ಆಂದೋಲನಗಳ ಮೂಲಕ ಶಾಂತಿ ಪಥದಲ್ಲಿ ಸಾಗಿದ ದಿವ್ಯಚೇತನ. ಗಾಂಧೀಜಿ ಅವರು ತಾವು ನಂಬಿದ್ದ ಅಹಿಂಸಾ ತತ್ವದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ.

ಗಾಂಧೀಜಿ ಪರಿಸರ ಪ್ರೇಮಿ

ಮಹಾತ್ಮ ಗಾಂಧೀಜಿ ಅವರು ಅಪ್ರತಿಮವಾದ ದೇಶ ಪ್ರೇಮಿ ಆಗಿದ್ದರು. ಗಿಡಮರಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಚಿಕ್ಕ ವಯಸ್ಸಿನಿಂದಲೂ ಅವರಿಗೆ ಗಿಡಗಳನ್ನು ಬೆಳೆಸುವುದರಲ್ಲಿ ತುಂಬ ಆಸಕ್ತಿ ಇತ್ತು. ದೇಶದ ಜನತೆ ಗಿಡಮರಗಳನ್ನು ಯಥೇಚ್ಚವಾಗಿ ಬೆಳೆಸುವುದರ ಮೂಲಕ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಬೇಕೆಂದು ಸಂದೇಶ ಸಾರಿದ್ದರು. ಗಿಡಮರಗಳಿದ್ದರೆ ದೇಶ ಸುಂದರವಾಗಿಯೂ ಕಾಣುತ್ತದೆ ಎಂದು ನಂಬಿದ್ದರು. ಈ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಬೇಕೆಂದು ಆಶಿಸಿದರು.

ಹಿರಿಯ ಗಾಂಧಿ ಮಾರ್ಗಿ ಕೆ.ಟಿ.ವೀರಪ್ಪ ಮಾತನಾಡಿ, 1969ರಿಂದ ಗಾಂಧಿಭವನದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಈ ಬಾರಿ 75ನೇ ಸ್ವಾತಂತ್ರ್ಯೋತ್ಸವ ದಿನ ಸಂಭ್ರಮದಲ್ಲಿ ನಾವೆಲ್ಲ ಇದ್ದೇವೆ. ಈ ನಿಟ್ಟಿನಲ್ಲಿ ಗಾಂಧಿಭವನ 75 ಸಸಿಗಳನ್ನು ನೆಟ್ಟು ಅರ್ಥಪೂರ್ಣವಾಗಿ ಈ ದಿನವನ್ನು ಆಚರಣೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕುಲಸಚಿವರಾದ ಪ್ರೊ.ಆರ್‌ ಶಿವಪ್ಪ ಮಾತನಾಡಿ, ಆಧುನಿಕ ಭಾರತದ ಬೌದ್ಧಿಕ ಜಗತ್ತನ್ನು ಹಲವು ಮಹನೀಯರು ಕಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕಾದರ ಜವಾಬ್ದಾರಿ ನಮ್ಮ ಮೇಲಿದೆ. ಮೈಸೂರು ವಿವಿಯ ಸಾಕ್ಷಿಪ್ರಜ್ಞೆಯಂತೆ ಗಾಂಧಿಭವನ ಇದ್ದು, ಅನೇಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಪರೀಕ್ಷಾಂಗ ಕುಲಸಚಿವ ಪ್ರೊ. ಎ.ಪಿ.ಜ್ಞಾನಪ್ರಕಾಶ್, ಗಾಂಧಿ ಭವನದ ನಿರ್ದೇಶಕರಾದ ಪ್ರೊ.ಎಂ.ಎಸ್.ಶೇಖರ್, ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆ.ಮುಜಾವರ್, ಡಾ.ಎಂ.ಬಿ.ಸುರೇಶ ಸೇರಿದಂತೆ ಇತರರು ಭಾಗವಹಿಸಿದ್ದರು.

ENGLISH SUMMARY….

“Mahatma Gandhiji’s thoughts always exists in us”: UoM VC
Mysuru, August 15, 2021 (www.justkannada.in): “Mahatma Gandhiji is not with us today. But his thoughts and principles still exist in us,” opined Prof. G. Hemanth Kumar, Vice-Chancellor, University of Mysore.
He inaugurated the 75 sapling planting program held at the Gandhi Bhavana, in Manasagangotri campus on the occasion of the 75th Independence Day celebrations organized by the University of Mysore today. “Mahatma Gandhiji possessed a unique personality. He attracted the attention of the entire world through his thoughts of truth and non-violence. He brought independence to our country through his non-violence principles,” he said.
Keywords: 75th Independence Day celebrations/ University of Mysore/ Gandhi Bhavana/ Manasagangotri

Key words: Mahatma Gandhi- thoughts- always -alive -Mysore university-VC- Prof G Hemanth Kumar