ಮಹಾತ್ಮ ಗಾಂಧಿ ಅಹಿಂಸೆ ಮೂಲಕವೇ ಜಗತ್ತಿನ ಮೂಲೆ ಮೂಲೆ ತಲುಪಿ ಪೂಜ್ಯರಾದರು-ಸಿಎಂ ಸಿದ್ಧರಾಮಯ್ಯ.

ಬೆಂಗಳೂರು ಅಕ್ಟೋಬರ್,2,2023(www.justkannada.in):  ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಾಗ್ರಿ ಮತ್ತು ತಂತ್ರಜ್ಞಾನ ಇಲ್ಲದೆ ಕೇವಲ ಅಹಿಂಸೆ ಮತ್ತು ತಮ್ಮ ಬದುಕಿನ ಸರಳತೆಯಿಂದಲೇ ಮಹಾತ್ಮಗಾಂಧಿ ವಿಶ್ವದ ಮೂಲೆ ಮೂಲೆಗೆ ತಲುಪಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಅವರ ಜಯಂತಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು, “ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, “ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ” ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಉದಾಹರಿಸಿದರು.

ನಮ್ಮ ಸರ್ಕಾರ ರೂಪಿಸುತ್ತಿರುವ ಕಾರ್ಯಕ್ರಮಗಳಲ್ಲಿ ಮಹಾತ್ಮಗಾಂಧಿ ಅವರ ಆಶಯಗಳು ಸೇರಿವೆ. ಗಾಂಧಿ ಅವರ ಆಶಯದಂತೆ ಕಟ್ಟ ಕಡೆಯ ವ್ಯಕ್ತಿಗೂ ಬದುಕುವ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಸರ್ಕಾರದ ಗುರಿ ಎಂದರು. ಕಾನೂನು ಸಚಿವ ಹೆಚ್.ಕೆ.ಪಾಟೀಲ್  ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.

Key words: Mahatma Gandhi – world -non-violence – CM Siddaramaiah

ENGLISH SUMMARY..

[3:06 pm, 02/10/2023] Mahesh Sir Jk: Mahatma Gandhi reached every corner of the world through non-violence and became revered

Gandhi is the only Mahatma and father of the country

Bangalore A 2: Gandhi is the only Mahatma and father of the country. Chief Minister Siddaramaiah said that Mahatma Gandhi reached every nook and corner of the world with only non-violence and simplicity of his life, without any propaganda material and technology.

He was speaking after inaugurating the Mahatma Gandhi Jayanti programme held at Gandhi Bhavan in association with Karnataka Gandhi Smaraka Nidhi and other departments.

Once when Gandhi was travelling in third class compartment in a train, a fellow passengers asked, “Why are you travelling in the third class seat?” Gandhi replied to this, “There is no fourth class in the train. If there was, I would have travelled there. As it’s not available I am travelling in the third class.” The CM cited this incident to explain the simple personality of Gandhi.

Mahatma Gandhi’s aspirations are included in the programs formulated by our government. As per Gandhi’s aspiration, the aim of our government is to provide life opportunities to the last person , he said.

Minister for Law and Parliamentary affairs H.K.Patil and others were present.
[3:06 pm, 02/10/2023] Mahesh Sir Jk: Our government will not tolerate illegal activities: Chief Minister Siddaramaiah

Bengaluru, October 02 : Harassment and stone pelting at any religious event is illegal. Chief Minister Siddaramaiah said that our government will not tolerate such activities and will suppress them.

He was speaking to the media at Vidhansoudha today.

Miscreants pelted stones during the Eid Milad procession at Ragigudda in Shimoga. Stones were also thrown at the police and inevitably the police resorted to lathi charge. 43 miscreants who are responsible for the riots have been arrested and cases are being filed against them. Shimoga is under complete control. The police took action and peace is prevailing in Shivamogga. He said that all measures have been taken to maintain peace.