ಬೆಂಗಳೂರು,ಆ,18,2020(www.justkannada.in): ಸ್ವಾತಂತ್ರ ದಿನಾಚಾರಣೆ ವೇಳೆ ಶೂ ಧರಿಸಿ ಮಹಾತ್ಮರ ಫೋಟೊಗಳಿಗೆ ಪುಷ್ಪನಮನ ಸಲ್ಲಿಸಿ ವಿವಾದಕ್ಕೆ ಗುರಿಯಾಗಿದ್ದ ಬಿಡಿಎ ಆಯುಕ್ತ ಮಹದೇವ್ ಅವರು ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಡಿಎ ಆಯುಕ್ತ ಮಹದೇವ್, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಗೌರವ ಪೂರ್ವಕವಾಗಿ ಜರುಗಿತು. ಧ್ವಜಾರೋಹಣದ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ & ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೂ ಪುಷ್ಪ ನಮನ ಸಲ್ಲಿಸಲಾಯಿತು.
ಆದರೆ, ಮಹಾತ್ಮರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಪಾದರಕ್ಷೆ ಧರಿಸಿ ಗೌರವ ಸಲ್ಲಿಸಿಲ್ಲ. ಸ್ವತಂತ್ರ್ಯೋತ್ಸವ ಆಚರಣೆಯಲ್ಲಿ ಆಕಸ್ಮಿಕವಾಗಿ ಮರೆವಿನಿಂದ ನಡೆದ ಘಟನೆ. ಈ ಬಗ್ಗೆ ವಿಷಾದವಿದೆ. ನನಗೂ ಬೇಸರವಾಗಿದೆ ಎಂದು ಮಹದೇವ್ ತಿಳಿಸಿದ್ದಾರೆ.
ಗಾಂಧಿಜೀ ಅವರ ತತ್ವ ಆದರ್ಶಗಳು & ಅಂಬೇಡ್ಕರ್ ರಚಿತ ಸಂವಿಧಾನ ಬದ್ದವಾಗಿಯೇ ನಾನು ಕಾರ್ಯ ನಿರ್ವಹಿಸುತ್ತಿರುತ್ತೇನೆ. ಈ ಘಟನೆಯಿಂದ ಹಲವರಿಗೆ ನನ್ನಂತೆಯೇ ಬೇಸರವಾಗಿದೆ. ಇದರಿಂದ ನೋವಿಗೊಳಗಾಗಿರೋ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳಲ್ಲಿ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆಂದು ಬಿಡಿಎ ಆಯುಕ್ತರು ಹೇಳಿದ್ದಾರೆ.
74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹಾದೇವ್ ಅವರು ದ್ವಜಾರೋಹಣ ಮಾಡಿದ ಮೇಲೆ ಮಹಾತ್ಮಾಗಾಂಧಿ ಸೇರಿದಂತೆ ವಿವಿಧ ಗಣ್ಯರ ಫೋಟೋಗಳಿಗೆ ಪುಷ್ಪಗುಚ್ಛ ಸಮರ್ಪಿಸುವ ವೇಳೆ ಪಾದರಕ್ಷೆ ಧರಿಸಿ ಪುಷ್ಪನಮನ ಸಲ್ಲಿಸಿದ್ದರು.
Key words: Mahatmagandhi- photo- wearing –shoe-BDA- Commissioner