ನವದೆಹಲಿ,ನವೆಂಬರ್,23,2021(www.justkannada.in): ಭಾರತ-ಚೀನಾ ಗಡಿಭಾಗದ ಗಾಲ್ವಾನ್ ಕಣಿವೆಯ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಬಿಕ್ಕಮಲ್ಲ ಸಂತೋಷಬಾಬು ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಸಂತೋಷ್ ಬಾಬು ಅವರ ಪತ್ನಿ ಮತ್ತು ತಾಯಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಮಹಾವೀರ ಚಕ್ರವು ಯುದ್ಧದ ಸಮಯದಲ್ಲಿ ಅತ್ಯಂತ ಧೈರ್ಯಶಾಲಿ ಕಾರ್ಯಗಳನ್ನು ನಿರ್ವಹಿಸಿದ ಸೈನಿಕನಿಗೆ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ.
ಕಳೆದ ವರ್ಷ ಜೂನ್ ನಲ್ಲಿ ಲಡಾಖ್ ನ ಪೂರ್ವಭಾಗದ ಗಾಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಜತೆ ನಡೆಸಿದ್ಧ ಸಂಘರ್ಷದಲ್ಲಿ ಕರ್ನಲ್ ಸಂತೋಷ್ ಬಾಬು ಅವರು ಹುತಾತ್ಮರಾಗಿದ್ದರು. ಇವರು ಬಿಹಾರ 16ನೇ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
Key words: Mahaveer Chakra -award -Colonel -Santosh Babu-martyr – Galvan- Valley- conflict.
ENGLISH SUMMARY…
Mahavir Chakra conferred on Col. Santhosh Babu who sacrificed his life during the Galwan Valley conflict
New Delhi, November 23, 2021 (www.justkannada.in): The Govt. of India has conferred Mahavir Chakra award on Col. Bikkamalla Santhosh Babu, who laid down his life for the cause of the country during the India-China border Galwan Valley conflict.
Hon’ble President Ram Nath Kovind gave the award to Santhosh Babu’s wife and mother at a program held at the Rashtrapati Bhavan. The Mahavir Chakra is given to the soldiers considering their bravery and sacrifice. It is the second-highest gallantry award.
Col. Santhosh Babu laid down his life during the conflict that took place between the Indian and China soldiers at the Eastern Galwan Valley, in Ladakh, in June last year. He was serving in the Bihar 16th Regiment.
Keywords: Col. Santhosh Babu/ Mahavir Chakra/ award/ Galwan Valley