ಮುಂಬೈ,ಜು,20,2019: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ಸದ್ಯ ಚರ್ಚೆಯಾಗುತ್ತಿದೆ. ಆದರೆ ಅವರ ಆಪ್ತರ ಬಳಗದಿಂದ ಧೋನಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.
ಹೌದು, ಧೋನಿ ಆಪ್ತ ಬಳಗ, ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದೆ. ಧೋನಿ, ಸದ್ಯಕ್ಕೆ ನಿವೃತ್ತಿ ಘೋಷಣೆ ಮಾಡುವ ನಿರ್ಧಾರ ತೆಗೆದುಕೊಳ್ಳುವುದಿಲ್ಲವೆಂದು ಅರುಣ್ ಪಾಂಡ್ಯ ಹೇಳಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ನಾಳೆ ಘೋಷಣೆಯಾಗಲಿದೆ.
ಈಗ ಈ ಸಂಬಂಧ ಆಯ್ಕೆ ಸಮಿತಿ ಧೋನಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಿದೆ ಎನ್ನಲಾಗ್ತಿದೆ. ಆದ್ರೆ ಧೋನಿ ಈಗಾಗಲೇ ಸೇನೆಯಲ್ಲಿ ತರಬೇತಿ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಎರಡು ವಾರಗಳ ಕಾಲ ಧೋನಿ ಸೇನೆಯಲ್ಲಿ ತರಬೇತಿ ಪಡೆಯಲಿದ್ದಾರೆ. ಹಾಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿಲ್ಲ ಎಂದು ಇನ್ನೊಂದು ಮೂಲ ಹೇಳಿದೆ.