ಬೆಂಗಳೂರು, ಆಗಸ್ಟ್, 25, 2020(www.justkannada.in): ‘ಕೋಲುಮಂಡೆ ಆಲ್ಬಂ ಸಾಂಗ್ ಸಾಕಷ್ಟು ವಿವಾದ ಉಂಟುಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆ ರ್ಯಾಪರ್ ಚಂದನ್ ಶೆಟ್ಟಿ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಜಾನಪದ ಹಾಡನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ. ಸಂಕಮ್ಮ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ಮಲೈಮಹದೇಶ್ವರ ಸ್ವಾಮಿ ಇತಿಹಾಸ ತಿರುಚಿ ಹಾಡು ರಚಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರ್ಯಾಪರ್ ಚಂದನ ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ಯಾರಿಗೂ ನೋವುಂಟು ಮಾಡುವ ಉದ್ಧೇಶವಿಲ್ಲ. ಇದರಿಂದ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ. ಚಿತ್ರತಂಡದ ಪರವಾಗಿ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.
ಮರುಚಿತ್ರಣ: ವಿಡಿಯೋ ಗೆ ವಿರೋಧವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರ ತಂಡವು ಹಾಡನ್ನು ಸಂಪೂರ್ಣ ಮರು ಚಿತ್ರಣ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
Key words ; Maheshwara-song-portrayed-obscene-Rapper-Chandan-Shetty-apologizes-devotees-Mahadeshwara