ಮೈಸೂರು,ಸೆಪ್ಟಂಬರ್,17,2021(www.justkannada.in): ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಬಿಜೆಪಿ ನಿಯೋಗ ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಸಲ್ಲಿಸದೆ. ಇದಕ್ಕೆ ಮಹಿಷಿ ದಸರಾ ಆಚರಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಬಿಜೆಪಿ ನಿಯೋಗ ಸಲ್ಲಿಸಿರುವ ಮನವಿ ಪತ್ರದಲ್ಲಿ ಶೂದ್ರ ಪದಬಳಕೆಗೂ ಸಾಹಿತಿ ಕೆ ಎಸ್ ಭಗವಾನ್ ಹಾಗೂ ಪ್ರೋ ಮಹೇಶ್ ಚಂದ್ರಗುರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಲವರ ಪ್ರೇರಣೆಯಿಂದ ತಪ್ಪು ತಪ್ಪಾಗಿ ಮನವಿ ಕೊಟ್ಟಿದ್ದಾರೆ. ಇಂತಹ 21ನೇ ಶತಮಾನದಲ್ಲಿ ಗೊತ್ತಿಲ್ಲದೆ ನಾವು ಶೂದ್ರರು ಎಂದಿರುವುದು ಅಪಾಯಕಾರಿ ಮಾತು. ತಮ್ಮ ನಿಲುವುಗಳನ್ನು ತಿದ್ದುಕೊಳ್ಳಬೇಕು ಎಂದು ಸಾಹಿತಿ ಕೆ ಎಸ್ ಭಗವಾನ್ ಕಿಡಿಕಾರಿದ್ದಾರೆ.
ಇನ್ನು ಈ ವೇಳೆ ಮಾತನಾಡಿರುವ ಪ್ರೋ ಮಹೇಶ್ ಚಂದ್ರ ಗುರು, ಪಾಳಿ ಭಾಷೆಯಲ್ಲಿ ರಾಕ್ಷಸರು ಅಂದರೆ ರಕ್ಷಕ ಅಂತ ಅರ್ಥ. ನಾವು ನಿಜವಾದ ರಕ್ಷಕರು. ಅವರು ರಾಕ್ಷಸರು. ತಾಲಿಬಾನ್ ಸಂಸ್ಕೃತ ವಾರಸುದಾರು ನೀವು. ಇಲ್ಲಿನ ತಾಲಿಬಾನಿಗಳನ್ನು ಒದ್ದು ಓಡಿಸುವುದು ನಮ್ಮ ಧರ್ಮ. ಮೈಸೂರಿನಲ್ಲಿ ಒಬ್ಬ ತಾಲಿಬಾನ್ ಸಿಂಹ ಇದ್ದಾನೆ. ಅವರ ಪಾಟಾಲಾಂ ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದಾರೆ. ವಿಜಯಶಂಕರ್ ಒಬ್ಬ ಅರ್ಧನಾರೀಶ್ವರ. ಸಂಸ್ಕೃತಿ ಗೊತ್ತಿಲ್ಲದ ಮಂಗಳ ಸೋಮಶೇಖರ್ ಗೆ ಹೆದರಿ ಮಹಿಷಾ ದಸರಾ ನಿಲ್ಲಿಸೋದಿಲ್ಲ. ಆಚರಣೆಗೆ ಅನುಮತಿ ನೀಡದಿದ್ದರೂ ನಾವು ಮಹಿಷಾ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದು ಹೇಳಿದರು.
ಮಂಗಳ ಸೋಮಶೇಖರ್ ಒಬ್ಬ ಮಹಾನ್ ಅವಿವೇಕಿ. ಸ್ತ್ರೀ ಪ್ರಜ್ಞೆ, ಸಂವಿಧಾನ, ಸಮಾನ ಪ್ರಜ್ಞೆ ಅವರಿಗೆ ಇಲ್ಲ. ಇದು ಹೇಗೆ ಮೈಸೂರು ಸಂಸ್ಕೃತಿಗೆ ವಿರುದ್ಧ..? ವಿಶ್ವದ ಭೂಪಟದಲ್ಲಿ ಚಾಮುಂಡಿ ಮಂಡಲ ನೀಡಿದ್ದೀರಾ ಎಂದು ಪ್ರಶ್ನಿಸಿದ ಪ್ರೊ.ಮಹೇಶ್ ಚಂದ್ರಗುರು, ಆದರೆ ಮಹಿಷ ಮಂಡಳ ಇದೆ. ನೀವು ಪುರಾಣಗಳನ್ನು ಆಧರಿಸಿ ಇದನ್ನೆಲ್ಲ ಮಾಡುತ್ತಿದ್ದೀರಿ. ಇತಿಹಾಸ ಸತ್ಯ, ಪುರಾಣ ಸುಳ್ಳು ಅಂತ ಶರಣರು ಹೇಳಿದ್ದಾರೆ. ಸರ್ಕಾರ ಇಷ್ಟು ವರ್ಷಗಳಲ್ಲಿ ಚಾಮುಂಡಿ ದಸರಾ ಅಂತ ಮಾಡಿದೆಯಾ..? ನಾಡಹಬ್ಬದಲ್ಲಿ ಮಹಾರಾಜರು ಇರುವವರೆಗೂ ಅಂಬಾರಿ ಮೇಲೆ ಕೂರಿಸುತ್ತಿದ್ರು. ಆ ನಂತರ ಚಾಮುಂಡೇಶ್ವರಿ ಕೂರಿಸಿ ದಸರಾ ಮಾಡ್ತಾರೆ. ಚಾಮುಂಡೇಶ್ವರ ಅಂಬಾರಿ ಮೇಲು ಕೂರಿಸಿದ್ರೂ ಅದು ಚಾಮುಂಡಿ ದಸರಾ ಆಗಿಲ್ಲ ಎಂದು ಟೀಕಿಸಿದರು.
Key words: Mahisha Dasara –celebration-not -approved – Prof -Mahesh Chandraguru.