ಮೈಸೂರು,ಅಕ್ಟೋಬರ್,10,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೂ ಮುನ್ನ ಮಹಿಷಾ ದಸರಾ ಮತ್ತು ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಗಳ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು, ಎರಡು ಕಾರ್ಯಕ್ರಮಗಳಿಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ರಮೇಶ್ ಬಾನೋತ್ ಸ್ಪಷ್ಟನೆ ನೀಡಿದ್ದಾರೆ.
ಮಹಿಷಾ ದಸರಾ ಮತ್ತು ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಎರಡಕ್ಕೂ ಇನ್ನೂ ಅನುಮತಿ ನೀಡಿಲ್ಲ ಎಂದು ಪೊಲೀಸ್ ಆಯುಕ್ತ ಡಾ. ರಮೇಶ್ ಬಾನೋತ್ ತಿಳಿಸಿದ್ದಾರೆ.
ಅನುಮತಿ ಕೇಳಿ ಎರಡು ಕಡೆಯಿಂದ ಪೊಲೀಸ್ ಇಲಾಖೆಗೆ ಪತ್ರ ಬಂದಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಇವತ್ತು ಅಥವಾ ನಾಳೆ ಒಳಗೆ ಪೊಲೀಸ್ ಇಲಾಖೆ ನಿರ್ಧಾರ ಏನು ಎಂಬುದು ತಿಳಿಸುತ್ತೇವೆ. ಮೈಸೂರಿನ ಹಿತದೃಷ್ಟಿ ಹಾಗೂ ನಾಡಹಬ್ಬದ ವೈಭೋಗಕ್ಕೆ ಯಾವುದೇ ಧಕ್ಕೆಯಾಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಡಾ. ರಮೇಶ್ ಬಾನೋತ್ ಹೇಳಿದರು.
Key words: Mahisha Dasara -Chamundi Betta Chalo- -permission – Police Commissioner -Dr. Ramesh Banoth