ಮಂಡ್ಯ, ಸೆಪ್ಟಂಬರ್,14,2022(www.justkannada.in): ಮಂಡ್ಯ ಜಿಲ್ಲೆಯ ಮಳವಳ್ಳಿಯ ಎಂ. ನಾಗರತ್ನ ಅವರಿಗೆ ಕರ್ನಾಟಕ ವಿಶ್ವ ವಿದ್ಯಾಲಯ ಪಿ.ಎಚ್ಡಿ (ಡಾಕ್ಟರೇಟ್) ಪದವಿ ಘೋಷಿಸಿದೆ.
ನಾಗರತ್ನ ಅವರು ವಿವಿಯ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ “ಹಿಸ್ಟೋರಿಯೋಗ್ರಪಿ ಆಫ್ ಪಲ್ಲವಾಸ್- ಎ ಕ್ರಿಟಿಕಲ್ ಸ್ಟಡಿ”ವಿಷಯದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.
ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಫ್ರೊ. ಲೋಕೇಶ್ ಅವರ ಮಾರ್ಗದರ್ಶನದಲ್ಲಿ ನಾಗರತ್ನ ಅವರು ಮಹಾ ಪ್ರಬಂಧ ಸಿದ್ಧಪಡಿಸಿದ್ದರು.
ಕಿರುಪರಿಚಯ: ಪ್ರಸ್ತುತ ಉಡುಪಿಯ ಅಜ್ಜರಕಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಗೃಹಿಣಿ, ಮಳವಳ್ಳಿಯ ನಾಗರತ್ನ ಅವರು ಇತಿಹಾಸ ಮತ್ತು ಕನ್ನಡ ಈ ಎರಡು ವಿಷಯಗಳಲ್ಲಿ ಕ್ರಮವಾಗಿ ಬೆಂಗಳೂರು ವಿವಿ ಮತ್ತು ಮೈಸೂರಿನ ಕರಾಮು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಂ.ಎಡ್ ಪದವಿ ಅಧ್ಯಯನ ಮಾಡಿರುವ ಇವರು ಎರಡು ವರ್ಷ ಪ್ರೌಢಶಾಲಾ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಶಾಲಾ ವಿದ್ಯಾರ್ಥಿನಿಯಾಗಿದ್ದ ದಿನಗಳಿಂದಲೂ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಗಮನ ಸೆಳೆದಿದ್ದ ಇವರು NCC ‘ಬಿ’ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
Key words: Malavalli Nagaratna – PhD – Karnataka University- Dharwad