ಹುಂಡಿ ಎಣಿಕೆ: ಮತ್ತೆ ಕೋಟ್ಯಾಧಿಪತಿಯಾದ ಮಾದಪ್ಪ

ಚಾಮರಾಜನಗರ,ನವೆಂಬರ್,21,2024 (www.justkannada.in): ಮಲೆ‌ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ ಕೋಟ್ಯಾಂತರ ನಗದು ಸಂಗ್ರಹವಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ ಕಾರ್ಯ ಇಂದು ನಡೆಯಿತು. ಮಲೆ‌ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿ ವರ್ಗದದಿಂದ ಎಣಿಕಾ ಕಾರ್ಯ ನಡೆಯಿತು.   25 ದಿನಗಳ ಹುಂಡಿಯಲ್ಲಿ ಬರೋಬ್ಬರಿ 2.43 ಕೋಟಿ ನಗದು,ಚಿನ್ನ,ಬೆಳ್ಳಿ ಪದಾರ್ಥಗಳ ಸಂಗ್ರಹವಾಗಿದೆ.

ನಿನ್ನೆ ಮುಂಜಾನೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಮಾಸಿಕ ಹುಂಡಿ ಎಣಿಕೆಯಲ್ಲಿ 2,43,65,775 ನಗದು, 62 ಗ್ರಾಂ ಚಿನ್ನ,2.512 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಜೊತೆಗೆ ಅಮಾನ್ಯವಾಗಿರುವ 2000 ಮುಖ ಬೆಲೆಯ 22 ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ.

Key words: Male Mahadeshwara hill, hundi, count