ಚಾಮರಾಜನಗರ,ಮಾರ್ಚ್,4,2025 (www.justkannada.in): ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ಶಿವರಾತ್ರಿ ಜಾತ್ರಾ ಮಹೋತ್ಸವ ನಡೆದ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ಅಪಾರ ಪ್ರಮಾಣದಲ್ಲಿ ಆದಾಯ ಹರಿದು ಬಂದಿದೆ.
ಹುಂಡಿ ಹಣ ಹೊರತು ಪಡಿಸಿ ಐದು ದಿನಗಳಲ್ಲಿ ಬರೋಬ್ಬರಿ 3.37 ಕೋಟಿ ಆದಾಯ ಬಂದಿದೆ. 1298 ಜನರಿಂದ ಚಿನ್ನದ ರಥೋತ್ಸವ,122 ಜನರಿಂದ ಬೆಳ್ಳಿ ರಥೋತ್ಸವ, 8,889 ಜನರಿಂದ ಹುಲಿವಾಹನ, 530 ಜನರಿಂದ ರುದ್ರಾಕ್ಷಿ ಮಂಟಪ, 1315 ಜನರಿಂದ ಬಸವ ಉತ್ಸವ ನೆರವೇರಿದೆ.
ಉತ್ಸವಗಳಿಂದ 94,24,347 ರೂ, ವಿವಿಧ ಸೇವೆಗಳಿಂದ 6,58,600 ರೂ, ಪ್ರಸಾದದಿಂದ 9,31,250 ಒಟ್ಟು ವಿವಿಧ ಸೇವೆಗಳಿಂದ 3,37,08,247 ರೂ ಸಂದಾಯವಾಗಿದೆ. ಈ ಕುರಿತು ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮಾಹಿತಿ ನೀಡಿದೆ.
Key words: five days, Male Mahadeshwara Hill, Rs. 3.37 crore, income