ಚಾಮರಾಜನಗರ,ಡಿಸೆಂಬರ್,21,2024 (www.justkannada.in): ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಂ ಆರ್ ಮಂಜುನಾಥ್, ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಪ್ರಾಧಿಕಾರದ ಕಾರ್ಯದರ್ಶಿ ರಘು ಸೇರಿದಂತೆ ಒಂದು ನಿಯೋಗ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಟಿಟಿಡಿ ವ್ಯವಸ್ಥಾಪಕರಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ದೇವರ ದರ್ಶನ, ಸರತಿ ಸಾಲು, ಪ್ಲಾಸ್ಟಿಕ್ ಮರುಬಳಕೆ, ವಸತಿ ದೇವಾಲಯದ ಮಲೇ ಮಹದೇಶ್ವರ ಬೆಟ್ಟದಲ್ಲೂ ಅನುಷ್ಠಾನ ತರಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಟಿಟಿಡಿ ಅಧಿಕಾರಿಗಳಾದ ಕೋದಂಡ ರಾಮು ಅವರಿಂದ ಡಿಸಿ ಶಿಲ್ಪಾನಾಗ್ ಅವರ ನಿಯೋಗ ಸಮಗ್ರ ಮಾಹಿತಿ ಪಡೆದುಕೊಂಡಿತು.
Key words: developing, Male Mahadeshwara Hill, Tirupati, model