ಜಮೀನು ಕಬಳಿಕೆ ಆರೋಪ ಸಾಬೀತು ಮಾಡಿದ್ರೆ ರಾಜೀನಾಮೆ- ಮಲ್ಲಿಕಾರ್ಜುನ ಖರ್ಗೆ ಸವಾಲು

ನವದೆಹಲಿ,ಏಪ್ರಿಲ್,3,2025 (www.justkannada.in): ತಮ್ಮ ವಿರುದ್ದ ವಕ್ಫ್ ಜಮೀನು ಕಬಳಿಕೆ ಆರೋಪ ಮಾಡಿದ ಸಂಸದ ಅನುರಾಗ್ ಠಾಕೂರ್ ಗೆ ತಿರುಗೇಟು ನೀಡಿರುವ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಮೀನು ಕಬಳಿಕೆ ಆರೋಪ ಸಾಬೀತು ಮಾಡಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,  60 ವರ್ಷದ ರಾಜಕೀಯದಲ್ಲಿ ಇಂತಹ ಆರೋಪ ನಿರೀಕ್ಷಿಸಿರಲಿಲ್ಲ. ಅನುರಾಗ್ ಠಾಕೂರ್ ನನ್ನ  ವಿರುದ್ದ  ಆಧಾರ ರಹಿತ ಆರೋಪ ಮಾಡಿದ್ದಾರೆ.  ಸಂಸದರು ವಿರೋಧಿಸಿದ ಬಳಿಕ ಹೇಳಿಕೆ ವಾಪಸ್ ಪಡೆದಿದ್ದಾರೆ.  ಆದರೆ ಡ್ಯಾಮೇಜ್ ಆಗಿದೆ ಮಾಧ್ಯಮಗಳಲ್ಲೂ ವರದಿಯಾಗಿದೆ.  ಇದರಿಂದ ನನ್ನ ಚಾರಿತ್ರ್ಯ ಗೌರವಕ್ಕೆ ಧಕ್ಕೆಯಾಗಿದೆ.  ಹೆಚ್.ಡಿ ದೇವೇಗೌಡರು ಇದನ್ನು ಕೇಳಿಸಿಕೊಳ್ಳಬೇಕು.  ಹೆಚ್ ಡಿಡಿ 50 ವರ್ಷದಿಂದ ನನ್ನನ್ನು ನೋಡಿದ್ದಾರೆ. ವಿಪಕ್ಷ ನಾಯಕನಾಗಿ ಒತ್ತಾಯಪೂರ್ವಕವಾಗಿ ಎದ್ದು ನಿಲ್ಲಬೇಕಿದೆ ಠಾಕೂರ್ ಹೇಳಿಕೆ ವಿರೋಧಿಸಿಬೇಕಿದೆ  ಎಂದರು.

ಹಾಗೆಯೇ  ಅನುರಾಗ್ ಠಾಕೂರ್ ಆರೋಪ ಸಾಬೀತುಪಡಿಸಿದ್ರೆ ನಾನು ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಸಾಅನುರಾಗ್ ಠಾಕೂರ್ ಸಾಬೀತುಪಡಿಸದಿದ್ದರೇ ಅವರೇ ರಾಜೀನಾಮೆ ನೀಡಬೇಕು ಎಂದು ಖರ್ಗೆ ಸವಾಲು ಹಾಕಿದರು.

ನಾನು ಇಂತಹ ಬೆದರಿಕೆಗೆ ಹೆದರುವುದಿಲ್ಲ  ನಾನು ಕಾರ್ಮಿಕನ ಮಗ ಅಲ್ಲಿಂದ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ವಿಧಾನಸಭೆಯಲ್ಲಿ ಯಾರೂ ನನಗೆ ಬೆರಳು ಎತ್ತಿ ಮಾತನಾಡಲ್ಲ. ಆದರೆ ಬಿಜೆಪಿ ನಾಯಕರು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹೆದರಲ್ಲ ಬಗ್ಗಲ್ಲ. ಒಂದಿಂಚೂ ಭೂಮಿಯನ್ನೂ ನಾನು ಕಬಳಿಸಿಲ್ಲ. ಹೀಗಾಗಿ ಅನುರಾಗ್ ಠಾಕೂರ್ ಕ್ಷಮೆ ಕೇಳಲೇ ಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

Key words: Mallikarjun Kharge, challenges, resign , land grabbing, proven