ಕಲಬುರಗಿ,ಏಪ್ರಿಲ್,17,2025 (www.justkannada.in): ಜಾತಿ ಜನಗಣತಿ ವರದಿಯ ಬಗ್ಗೆ ಚರ್ಚಿಸಲು ಇಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು ಸಾಕಷ್ಟು ಚರ್ಚೆಯಾಗುವ ಸಾಧ್ಯತೆ ಇದೆ. ಜಾತಿಗಣತಿಗೆ ಪರ ವಿರೋಧಗಳು ವ್ಯಕ್ತವಾಗಿದ್ದು ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಜಾತಿ ಗಣತಿ ವರದಿಯನ್ನ ನಾನೂ ಕೂಡ ನೋಡಿಲ್ಲ . ಜಾತಿಗಣತಿ ಮಾಡೋದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು. ಇದನ್ನ ಕೇಂದ್ರ ಸರ್ಕಾರ ಮಾಡಿದ್ದಲ್ಲ. ಪ್ರತಿಯೊಂದು ರಾಜ್ಯದಲ್ಲಿ ಜಾತಿಗಣತಿ ಮಾಡುತ್ತಾರೆ. ಕ್ಯಾಬಿನೆಟ್ ನಲ್ಲಿ ಏನು ಹೊರಬರತ್ತೆ ನೋಡಬೇಕು ಎಂದರು.
ಜಾತಿಗಣತಿ ವರದಿಗೆ ಕೆಲ ಸಮುದಾಯಗಳ ವಿರೋಧ ವಿಚಾರ, ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ ಅಷ್ಟೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
Key words: state government, caste census, AICC President, Mallikarjun Kharge